ಕೊಡಿಗೇನಹಳ್ಳಿ: ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಹೋಬಳಿಯ ದಂಡೀಪುರದ ವಿಜಯನಂದಿ ಕ್ರಾಸ್ ಬಳಿ ಚಲಿಸುತಿದ್ದ ದ್ವಿಚಕ್ರ ವಾಹನ ಹಾಗೂ ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ದ್ವಿಚಕ್ರ ವಾಹನ ಸವಾರ ಗೌರಿಬಿದನೂರು ಹೊಸೂರು ಮಾಚೇನಹಳ್ಳಿ ಶಿಕ್ಷಕ ರವೀಂದ್ರ.ಕೆ.ಆರ್. ಸ್ಥಳದಲ್ಲೇ ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ.
ಮೃತ ಶಿಕ್ಷಕ ಗೌರಿಬಿದನೂರು ತಾಲೂಕಿನ ಕರೆಕಲ್ಲಹಳ್ಳಿ ನಿವಾಸಿ ಎಂದು ತಿಳಿದು ಬಂದಿದ್ದು ಮೃತರಿಗೆ ಪತ್ನಿ ಸೇರಿದಂತೆ ಒಂದು ಗಂಡು ಮತ್ತು ಹೆಣ್ಣು ಮಕ್ಕಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹವನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ಸಿಪಿಐ ಹನುಮಂತರಾಯಪ್ಪ, ಪಿಎಸ್ಐ ರಾಜೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.









