--ಇಲ್ಲಿ ಜಾಹೀರಾತು--

ಖಾಸಗಿ ಬಸ್ ದರ ಹೆಚ್ಚಳ

On: May 15, 2026 2:28 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರವನ್ನು ಸಹ ಹೆಚ್ಚಳ ಮಾಡಲಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.
ಈ ಕುರಿತು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಮಾಹಿತಿ ನೀಡಿದೆ. ಶೇ.20ರಿಂದ 30ರಷ್ಟು ದರ ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪ್ರತಿದಿನ ಖಾಸಗಿ ಬಸ್ ಮಾಲೀಕರು ಕನಿಷ್ಠ 150 ಲೀಟರ್ ಡೀಸೆಲ್ ಹಾಕಿಸಿಕೊಳ್ಳಬೇಕು. ನಮಗೆ ಪ್ರತಿ ಟ್ರಿಪ್‌ಗೆ ಹೆಚ್ಚುವರಿಯಾಗಿ 450 ರೂ. ಅಂದರೆ ಹೊರೆ ಆಗಲಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡುತ್ತಿದ್ದೇವೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಬೀಳಲಿದೆ ಎಂದಿದೆ.
ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನಗಳ ಯುನಿಯನ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸ್ಕೂಲ್ ವಾಹನಗಳ ದರ ಶೇ.10ರ ವರೆಗೆ ಏರಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯ ಟ್ರ‍್ಯಾವೆಲ್ ಪಾಸೆಂಜರ್ ವಾಹನಗಳ ದರವೂ 10- 15ನಷ್ಟು ಏರಿಕೆಯಾಗಲಿದೆ.
ಒಲಾ, ಉಬರ್ ದರ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸೋಮವಾರ ಚಾಲಕರ ಸಂಘದಿಂದ ಸಭೆ ನಡೆಯಲಿದೆ. ಸಭೆಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ. ದರ ಏರಿಕೆಗೆ ಒತ್ತಡ ಹೇರಲು ತಯಾರಿ ನಡೆಸಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now