
ತುಮಕೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ 2026ರ ಕೆಸಿಇಟಿ ಫಲಿತಾಂಶದಲ್ಲಿ ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾನಿಧಿಯ ವಿದ್ಯಾರ್ಥಿ ಎಸ್.ಯಶಸ್ ರಾಜ್ಯ ಮಟ್ಟದಲ್ಲಿ 77ನೇ ರ್ಯಾಂಕ್ ಗಳಿಸಿದ್ದು, ಶಶಾಂಕ್ ಡಿ.ಕೆ. 386ನೇ ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ಇತರೆ ವಿದ್ಯಾರ್ಥಿಗಳಾದ ರಚನಾ ಎಸ್. 1111, ರೋಹಿತ್ ವೈ.ಜಿ. 1370, ಗಿರಿಜಾ ಎನ್. 1656, ಅಕ್ಷಯ್ ಎಸ್. 2380, ನಿಹಾರಿಕಾ ಎ. 2520, ಕಿರಣ್ ಗೋವಿಂದ್ 2550 ಹಾಗೂ ಹರ್ಷನ್ ಗೌಡ ಆರ್. 2944ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಪ್ರಾಂಶುಪಾಲ ಸಿದ್ದೇಶ್ವರಸ್ವಾಮಿ, ನ್ಯೂ ಬ್ಲಾಕ್ ಪ್ರಾಂಶುಪಾಲ ಸುಬ್ರಹ್ಮಣ್ಯ ಡಿ.ಕೆ., ವಿಜ್ಞಾನ ವಿಭಾಗದ ಸಂಯೋಜಕ ಡಾ. ಮನೋಹರ್ ಟಿ. ಉಪಸ್ಥಿತರಿದ್ದರು.
ಕೆಸಿಇಟಿ: ಯಶಸ್ಗೆ 77ನೇ ರ್ಯಾಂಕ್







