--ಇಲ್ಲಿ ಜಾಹೀರಾತು--

ಸಿಲಿಂಡರ್ ಪೈಪ್ನಿಂದ ಅನಿಲ ಸೋರಿಕೆ: ಮೂವರು ಸಾವು

On: February 2, 2026 2:31 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಕನಕಪುರ: ಅಡುಗೆ ಸಿಲಿಂಡರ್ ಪೈಪ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಕನಕಪುರದ ಅಮರನಾರಾಯಣ ಬ್ಲಾಕ್ ನ ಪ್ರಶಾಂತ್ (22), ಅವರ ತಾಯಿ ಸವಿತಾ (45) ಮತ್ತು ತಂದೆ ಸಿದ್ದರಾಜು (50) ಸಾವನ್ನಪ್ಪಿದ್ದಾರೆ.
ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ-ಬೋಂಡ ಮತ್ತು ಕಾರ ಮಿಕ್ಸರ್ ಮಾರುವ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್, ಸೋಮವಾರ ಮನೆಯಲ್ಲೇ ಕಾರ ಮಿಕ್ಸರ್ ತಯಾರಿಸುತ್ತಿದ್ದಾಗ ಸಿಲಿಂಡರ್ ಪೈಪ್ನಿಂದ ಗ್ಯಾಸ್ ಸೋರಿಕೆಯಾಗಿತ್ತು.
ಬೆಂಕಿ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಶಾಂತ್, ಸಿಲಿಂಡರ್ ಹೊತ್ತಿಕೊಂಡು ಮನೆಗೆ ಬೆಂಕಿ ಹತ್ತಬಹುದೆಂದು ಭಯಪಟ್ಟು ಅದನ್ನು ನಂದಿಸಲು ನೀರಿನ ತೊಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದರು. ಆ ಸಮಯದಲ್ಲಿ ಅವರಿಗೆ ತೀವ್ರವಾಗಿ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳಾಗಿದ್ದವು.
ಬೆಂಕಿ ತಗುಲಿ ಸುಟ್ಟ ಗಾಯಗಳಾದಾಗ ಭಯಗೊಂಡ ಪ್ರಶಾಂತ್ ಮತ್ತು ಅವರ ತಂದೆ, ತಾಯಿ ಗ್ಯಾಸ್ ಸ್ಟವ್ ಸಿಲಿಂಡರ್ ಅಲ್ಲೇ ಬಿಟ್ಟು ಮನೆಯ ಒಳಗೆ ಓಡಿದ್ದಾರೆ. ಮನೆಯ ಅಕ್ಕಪಕ್ಕದವರು ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ, ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದರು.
ಘಟನೆಯ ಮಾಹಿತಿ ತಿಳಿದ ಗ್ಯಾಸ್ ಏಜೆನ್ಸಿ ಅವರು ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದನ್ನು ಪರಿಶೀಲಿಸಿ ಮನೆಯ ಒಳಗಡೆ ಇದ್ದಂತಹ ಗ್ಯಾಸ್ ತುಂಬಿದ್ದ ಮತ್ತೊಂದು ಸಿಲಿಂಡರನ್ನು ಹೊರಗಡೆ ತೆಗೆದಿದ್ದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now