--ಇಲ್ಲಿ ಜಾಹೀರಾತು--

ಕೇಂದ್ರದಿಂದ ಇಡಿ ದುರ್ಬಳಕೆಗೆ ಕೆ.ಎನ್‌.ರಾಜಣ್ಣ ವಾಗ್ದಾಳಿ ಶೂದ್ರರಿಗೆ ಬುದ್ಧಿ ಕಡಿಮೆ ಅಂತ ಟಾರ್ಗೆಟ್‌…!

On: September 12, 2026 3:17 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

ತುಮಕೂರು: ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸತೀಶ್‌ ಜನಪ್ರಿಯತೆ ಕುಗ್ಗಿಸುವ ಪ್ರಯತ್ನವಾಗಿ ಇಡಿ ದಾಳಿ ನಡೆದಿದೆ. ನಾವೆಲ್ಲರೂ ಶೂದ್ರರು. ಶೂದ್ರರಿಗೆ ಬುದ್ಧಿ ಕಡಿಮೆ ಅಂತ ಟಾರ್ಗೆಟ್‌ ಮಾಡುತ್ತಾರೆ ಎಂದು ಮಾಜಿ ಸಚಿವ ಕೆ.ಎನ್‌‍.ರಾಜಣ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೀಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ ಎಂದು ಹೇಳಿದರು.
ಇ.ಡಿ ಅಧಿಕಾರಿಗಳು ಸಚಿವರ ಸರ್ಕಾರಿ ಬಂಗಲೆಗೆ ಹೋಗಿ ಅವರನ್ನು ಕೂರಿಸಿಕೊಂಡು ತನಿಖೆ ಮಾಡುವುದು ಏನಿತ್ತು? ಅವರದ್ದು ವಾರ್ಷಿಕ 2 ಸಾವಿರ ಕೋಟಿ ವ್ಯವಹಾರ ಇದೆ. ಮನೆಯಲ್ಲಿ 2 ಕೋಟಿ ಹಣ ಸಿಕ್ಕರೆ ಅದೇನು ದೊಡ್ಡದೇ? ಇದು ರಾಜಕೀಯ ಪ್ರೀರಿತ ದಾಳಿ ಎಂದು ಖಂಡಿಸಿದರು.
ಸತೀಶ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗ್ದೆಿ. ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳ ಜತೆಗೆ ಮಾತನಾಡಿರುವೆ. ನಾನು ಸತೀಶ ಜತೆಗೆ ನಿಲ್ಲುವೆ ಎಂಬ ಭರವಸೆ ಕೊಟ್ಟಿರುವೆ ಎಂದು ಹೇಳಿದರು.
ಇನ್ನೂ ನಾಲ್ಕೈದು ಸಚಿವರ ಮೇಲೆ ರೇಡ್‌ ಆಗಬಹುದು ಎಂದು ಹೇಳಿರುವ ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಅವರು, ನೀವು ಅವರನ್ನೇ ಕೇಳಬೇಕು. ಈ ರೀತಿಯ ರೇಡ್‌ನಲ್ಲಿ ಅವರು ಪರಿಣತರು. ಇದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದು ಎಂದು ಕಿಡಿಕಾರಿದರು.

ಅಪೆಕ್‌್ಸ 2ನೇ ಅವಧಿಗೆ
ನಾನು ಆಕಾಂಕ್ಷಿ ಅಲ್ಲ

ಅಪೆಕ್‌್ಸ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಎನ್‌.ರಾಜಣ್ಣ ಅವರು, ರಾಜಕೀಯದಲ್ಲಿ ಯಾವಾಗ ಬೇಕಾದರೂ; ಹೇಗೆ ಬೇಕಾದರೂ ಸ್ಥಿತ್ಯಂತರ ಬರಬಹುದು. ಅಪೆಕ್‌್ಸ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ನಾನು ಆಕಾಂಕ್ಷಿ ಅಲ್ಲ. ನನ್ನನ್ನು ಮನವೊಲಿಸಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಅಸತ್ಯ ಕ್ಷಣಿಕ. ಸತ್ಯಕ್ಕೆ ಆಯಸ್ಸು ಜಾಸ್ತಿ. ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದರು.
ಅಧಿಕಾರ ಬರುತ್ತದೆ, ಹೋಗುತ್ತದೆ. ಅದೇನು ನಮಪ್ಪನ ಆಸ್ತಿ ಅಲ್ಲ. ನನಗೇನೂ ನಷ್ಟ ಇಲ್ಲ. ಸಮಯವೇ ತೀರ್ಮಾನ ಮಾಡಲಿದೆ. ಈಗ ಆಯ್ಕೆ ಆಗಿರುವವರು ನನಗಿಂತ ಸಮರ್ಥರು. ಅವರಿಗೆ ಒಳ್ಳೆಯದಾಗಲಿ ಎಂದು ಅವರು ವ್ಯಂಗ್ಯವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಚುನಾವಣೆಗೆ
ಸ್ಪರ್ಧೆ ಬಗ್ಗೆ ಗೊಂದಲ

ನಾನು ಮತ್ತೇ ಚುನಾವಣೆಗೆ ನಿಲ್ಲವುದೋ, ಬೇಡವೋ ಎಂಬ ಗೊಂದಲದಲ್ಲಿದ್ದೇನೆ. ನಿಲ್ಲಬೇಕು ಎಂಬ ಕಾಲ ಬಂದರೆ ಕಾಂಗ್ರೆಸ್‌‍ನಿಂದಲೇ ಸ್ಪರ್ಧಿಸುವೆ ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು. ಕೆ.ಎನ್‌.ರಾಜಣ್ಣ ಜೆಡಿಎಸ್‌‍ ಅಥವಾ ಬಿಜೆಪಿಗೆ ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನನಗೆ ಅಧಿಕಾರ ಯಾವತ್ತು ಸುಲಭವಾಗಿ ಬಂದಿಲ್ಲ. ಎಲ್ಲಾ ಅಧಿಕಾರಗಳು ಕಷ್ಟದಿಂದಲೇ ಸಿಕ್ಕಿವೆ. ಈ ಅವಕಾಶಗಳಿಂದ ಜನರ ವಿಶ್ವಾಸ ಗಳಿಸಿದ್ದೇನೆ ಎಂದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now