--ಇಲ್ಲಿ ಜಾಹೀರಾತು--

ಹೃದಯಾಘಾತದಿಂದ ಭಕ್ತ ಸಾವು

On: March 30, 2026 2:16 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನಂಜನಗೂಡು: ನಂಜುಂಡೇಶ್ವರ ರಥೋತ್ಸವ ನೋಡಲು ಸೋಮವಾರ ಇಲ್ಲಿಗೆ ಬಂದಿದ್ದ ರಾಮನಗರ ಜಿಲ್ಲೆ ಮಾಗಡಿ ನಿವಾಸಿ ನಂಜುಂಡಸ್ವಾಮಿ (54) ಹೃದಯಾಘಾತದಿಂದ ಮೃತಪಟ್ಟರು. ಮಗ, ಸೊಸೆಯೊಂದಿಗೆ ಬಂದಿದ್ದ ಅವರು ರಥೋತ್ಸವ ಆರಂಭಕ್ಕೂ ಮುನ್ನ, ಮುಂಜಾನೆ 5ಕ್ಕೆ ರಥ ಬೀದಿಯಲ್ಲಿ ಸುಸ್ತಾಗಿ ಕುಳಿತುಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೇರು ಸಾಗುತ್ತಿದ್ದಾಗ ಉಂಟಾದ ನೂಕು ನುಗ್ಗಲಿನಲ್ಲಿ ಶ್ರೀರಾಂಪುರದ ರಂಗಸ್ವಾಮಿ ಎಂಬುವರು ಗಾಯಗೊಂಡರು. ನೂಕಾಟ ಆರಂಭವಾದಾಗ ಮಗುವನ್ನು ಕೈಹಿಡಿದುಕೊಳ್ಳಲು ಹೋಗಿ ಬ್ಯಾರಿಕೇಡ್ ಗೆ ಮುಖಕೊಟ್ಟರು. ಅದರಿಂದ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ರಥೋತ್ಸವದ ವೇಳೆ ನೂಕುನುಗ್ಗಲು ತಳ್ಳಾಟ ಉಂಟಾಗುವುದು ಸಾಮಾನ್ಯ. ಯಾವುದೇ ಕಾಲ್ತುಳಿತ ಉಂಟಾಗಿಲ್ಲ. ಕೆಲವರು ವದಂತಿ ಹಬ್ಬಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ನಿತ್ರಾಣರಾದವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now