--ಇಲ್ಲಿ ಜಾಹೀರಾತು--

ಅಪ್ರಾಪ್ತನಿಗೆ ಸ್ಕೂಟಿ ಚಾಲನೆ- 25 ಸಾವಿರ ದಂಡ

On: April 18, 2025 2:22 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಚಿಕ್ಕಮಗಳೂರು: ಅಪ್ರಾಪ್ತನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದ ವಾಹನ ಮಾಲೀಕನಿಗೆ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಜೆಎಂಎಫ್ ಸಿ ನ್ಯಾಯಾಲಯ ಸ್ಕೂಟಿ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದೆ.
ಏ.4ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಅವರ ಸಮ್ಮುಖದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಅಪ್ರಾಪ್ತ ಸ್ಕೂಟಿ ಚಾಲನೆ ಮಾಡಿಕೊಂಡು ಬಂದಿದ್ದು ಬಾಲಕನನ್ನು ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಸ್ಕೂಟಿಯು ಬಾಪುನಗರ ನಿವಾಸಿ ಮಹಮ್ಮದ್ ಸಿರಾಜ್ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಅಪ್ರಾಪ್ತನಿಗೆ ವಾಹನ ಚಾಲನೆ ಮಾಡಲು ನೀಡಿದ ಆರೋಪದ ಮೇಲೆ ಪೊಲೀಸರು ವಾಹನ ಮಾಲೀಕ ಮಹಮ್ಮದ್ ಸಿರಾಜ್ ವಿರುದ್ಧ ಕೇಸು ದಾಖಲಿಸಿದ್ದರು. ಏ.15 ರಂದು ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆ ಜೆಎಂಎಫ್ ಸಿ ನ್ಯಾಯಾಲದ ನ್ಯಾಯಾದೀಶರು ವಾಹನ ಮಾಲೀಕ ಮಹಮ್ಮದ್ ಸಿರಾಜ್ ಅವರಿಗೆ 25 ಸಾವಿರ ದಂಡ ವಿಧಿಸಿದ್ದಾರೆ. ಇತ್ತೀಚೆಗೆ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಅದರಲ್ಲೂ ದ್ವಿಚಕ್ರ ವಾಹನ ಚಾಲನೆ ಮಾಡುವುದು ಹೆಚ್ಚುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೀಗ ಮೂಡಿಗೆರೆ ನ್ಯಾಯಾಲಯ ನೀಡಿರುವ ತೀರ್ಪು ವಾಹನ ಮಾಲೀಕರಿಗೆ ಒಂದು ಪಾಠವಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now