--ಇಲ್ಲಿ ಜಾಹೀರಾತು--

ಶಿಶುವಿನ ಶವ ಪತ್ತೆ- ಯುವಕ ಬಂಧನ

On: April 19, 2025 2:13 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಯಲಹಂಕದ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಏ.2 ರಂದು ಗಾಂಧಿನಗರದ 2ನೇ ಅಡ್ಡರಸ್ತೆಯ ಕಸದತೊಟ್ಟಿಯಲ್ಲಿ ಕಂಬಳಿ ಸುತ್ತಿ ಬಿಸಾಡಿದ್ದ ಶಿಶುವನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು ಶಿಶು ಮೃತಪಟ್ಟಿರುವು ದಾಗಿ ತಿಳಿಸಿದರು.

ಪ್ರ6ಕರಣ ದಾಖಲಿಸಿಕೊಂಡು ಪೋಷಕರ ಪತ್ತೆಗಾಗಿ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಯಿತು. ವೃದ್ಧರೊಬ್ಬರು ಹಸುಗೂಸನ್ನು ಕಂಬಳಿ ಯಲ್ಲಿ ಸುತ್ತಿಕೊಂಡು ಸೈಕಲ್ ನಲ್ಲಿ ತೆರಳುತ್ತಿರುವ ದೃಶ್ಯ ಕಂಡು ಬಂದಿತ್ತು. ಆ ವ್ಯಕ್ತಿಯನ್ನು ಪತ್ತೆ ಮಾಡಿ ವಿಚಾರಿಸಿದಾಗ, ಮನೆ ಸಮೀಪದ ಯುವತಿಯೊಬ್ಬಳು ಮಗು ನೀಡಿರುವು ದಾಗಿ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.

ಯುವತಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ, ಆಕೆ ಬಾಲಕಿ ಎಂಬುದು ತಿಳಿದುಬಂತು. 22 ವರ್ಷದ ಭರತ್ ಎಂಬಾತನ ಜತೆ ಸಂಬಂಧದಿಂದಾಗಿ ಮಗು ಜನಿಸಿತು. ಈ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದ. ಮಗು ಹುಟ್ಟುವಾಗಲೇ ಮೃತಪಟ್ಟಿತ್ತು. ಯಾರಿಗೂ ಗೊತ್ತಾಗಬಾರದೆಂದು ವೃದ್ಧರ ಕೈಗೆ ಕೊಟ್ಟು ಕಳುಹಿಸಿದ್ದೆ ಎಂದು ಬಾಲಕಿ ಮಾಹಿತಿ ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now