--ಇಲ್ಲಿ ಜಾಹೀರಾತು--

ನಾಯಿ ದಾಳಿಗೆ 10 ತಿಂಗಳ ಕರು ಬಲಿ

On: April 29, 2025 2:20 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಕೊರಟಗೆರೆ: ಅಪರಿಚಿತ ನಾಯಿ ದಾಳಿಯಿಂದ ಕರುಗೆ ವಿಪರೀತ ಗಾಯ ಉಂಟು ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಕರುಕಲಘಟ್ಟ ಗ್ರಾಮದ ನಾಗರಾಜು ಎಂಬುವವರಿಗೆ ಸೇರಿದ್ದ 10 ತಿಂಗಳ ಕರು ಮೇಲೆ 3 ಅಪರಿಚಿತ ನಾಯಿಗಳು ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕರು ಕಳೆದುಕೊಂಡ ರೈತನ ಆಕ್ರಂದನ ಮುಗಿಲುಮಟ್ಟಿದೆ.
ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಿದ ಪರಿಣಾಮ ಈ ಘಟನೆ ನಡೆದಿದ್ದು, ಒಬ್ಬಂಟಿಯಾಗಿ ಮಕ್ಕಳು, ಗ್ರಾಮಸ್ಥರು ಓಡಾಡವುದು ಕಷ್ಟಕರವಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾಹಿತಿಯನ್ನು ಗ್ರಾಮದವರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಘಟನೆಯನ್ನು ಪಶುಪಾಲನಾ ಇಲಾಖೆ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿ ಕರು ಕಳೆದುಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ತಿಳಿಸಿ ಪರಿಹಾರ ಒದಗಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now