--ಇಲ್ಲಿ ಜಾಹೀರಾತು--

ರಾಯಚೂರು ಡೀಸಿ ಕಚೇರಿಗೆ ಬಾಂಬ್ ಈಮೇಲ್!

On: May 2, 2025 1:58 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ರಾಯಚೂರು: ರಾಯಚೂರಿನ ಹೊರವಲಯದ ಎಕ್ಲಾಸಪೂರು ಬಡಾವಣೆಯಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಈಮೇಲ್ ಬಂದಿದ್ದು ಸಿಬ್ಬಂದಿ ಹೌಹಾರಿ ಕಚೇರಿಯಿಂದ ಹೊರಗೆ ಬಂದಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಯವರಿಗೆ ಈಮೇಲ್ ಸಂದೇಶ ಬಂದಿದ್ದು ಮಾಹಿತಿ ಪಡೆಯುತ್ತಿದ್ದಂತೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಚೇರಿಯಿಂದ ಓಡಿ ಹೊರಬಂದರು.ಮಾಹಿತಿ ಪಡೆಯುತ್ತಿದ್ದಂತೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ 1 ಗಂಟೆಯವರೆಗೆ ಸರ್ಕಾರಿ ಕಚೇರಿಗಳ ಸಮಯ ನಿಗದಿ ಮಾಡಿದ್ದರಿಂದ ಸ್ವಲ್ಪ ಮುಂಚಿತವಾಗಿಯೇ ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ್ದಾರೆ. ಈಮೇಲ್ ಬಂದಿರುವುದನ್ನು ಎಸ್ಪಿ ಎಂ.ಪುಟ್ಟಮಾದಯ್ಯ ಖಚಿತಪಡಿಸಿದ್ದು, ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now