--ಇಲ್ಲಿ ಜಾಹೀರಾತು--

ಪಾಕಿಸ್ತಾನ ಸೇನೆ ಮೇಲೆ ತಾಲಿಬಾನ್ ದಾಳಿ

On: May 9, 2025 2:42 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ದೆಹಲಿ: ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ವೈಮಾನಿಕ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ಸೇನೆಯ ಪ್ರತಿದಾಳಿಗೆ ಪಾಕಿಸ್ತಾನ ಸೇನೆ ತತ್ತರಿಸಿದೆ. ಇದೇ ವೇಳೆ ಬಲೂಚಿಸ್ತಾನದ ಆರ್ಮಿ ಪಡೆಯೂ ಪಾಕಿಸ್ತಾನದ ಸೇನೆ ಮೇಲೆ ಮುಗಿಬಿದ್ದಿದೆ. 12 ಪಾಕಿಸ್ತಾನ ಸೈನಿಕರು ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು ಸೈನಿಕರ ದೇಹಗಳು ಛಿದ್ರವಾಗಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲಿಬಾನ್ ಸಹ ಪಾಕಿಸ್ತಾನ ಸೇನೆ ಮೇಲೆ ಮುಗಿಬಿದ್ದಿದೆ. ತೆಪ್ರೀಕ್-ಇ-ತಾಲಿಬಾನ್ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್ ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ಭಾರತದೊಂದಿಗಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ದಕ್ಷಿಣ ವಜೀರಿಸ್ತಾನದ ಶಕೈನಲ್ಲಿ ಈ ದಾಳಿ ನಡೆದಿದೆ. ಪಾಕಿಸ್ತಾನದ ಸೇನಾ ವಾಹನಗಳು ಸಹ ನಾಶವಾಗಿವೆ. ಈ ದಾಳಿಯಲ್ಲಿ, ಟಿಟಿಪಿ ಪಾಕಿಸ್ತಾನಿ ಸೇನೆಯ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದೆ. ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ್ ಮಧ್ಯೆ ಪಾಕಿಸ್ತಾನ ಸೇನೆಗೆ ಎರಡು ಬಾರಿ ಹೊಡೆತ ಬಿದ್ದಿದ್ದು, ಬಲೂಚಿಸ್ತಾನ್ ಪ್ರಾಂತ್ಯದ ಬೋಲಾನ್ ಮತ್ತು ಕೆಚ್ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್) ಹೊತ್ತುಕೊಂಡಿದೆ. ಈ ದಾಳಿಯಲ್ಲಿ 12 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now