--ಇಲ್ಲಿ ಜಾಹೀರಾತು--

ಆನ್ ಲೈನ್ ಲೈಂಗಿಕ ಕಿರುಕುಳ- ವಿದ್ಯಾರ್ಥಿನಿಗೆ ಬೆದರಿಕೆ

On: November 26, 2025 2:20 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಬೆಂಗಳೂರಿನಲ್ಲಿದ್ದ 24 ವರ್ಷದ ಶ್ರೀಲಂಕಾದ ಪ್ರಜೆಯೊಬ್ಬರು ಆನ್ ಲೈನ್ ಲೈಂಗಿಕ ಕಿರುಕುಳ ಜಾಲಕ್ಕೆ ಬಲಿಯಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ದೂರುದಾರರ ಪ್ರಕಾರ, ಅಪರಿಚಿತ ವ್ಯಕ್ತಿ ಇನ್ ಸ್ಟಾಗ್ರಾಂನಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದಾನೆ. ಕ್ರಮೇಣ ಆನ್ ಲೈನ್ ಮೂಲಕ ಸ್ನೇಹ ಬೆಳೆಸಿಕೊಂಡು ನಂತರ ವಾಟ್ಸಾಪ್ ನಲ್ಲಿ ಸಂತ್ರಸ್ತೆಯನ್ನು ಸಂಪರ್ಕಿಸಿದ್ದಾನೆ.
ವಿಡಿಯೋ ಕರೆಗಳ ಸಮಯದಲ್ಲಿ, ಆರೋಪಿಯು ತನ್ನ ಒಪ್ಪಿಗೆಯಿಲ್ಲದೆ ವೈಯಕ್ತಿಕ ಪೋಟೊಗಳು ಮತ್ತು ಖಾಸಗಿ ವಿಡಿಯೋಗಳನ್ನು ರಹಸ್ಯವಾಗಿ ತೆಗೆದುಕೊಂಡಿದ್ದಾನೆ. ನಂತರ ಅವುಗಳನ್ನು ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸಂತ್ರಸ್ತೆ ಹಣ ನೀಡಲು ನಿರಾಕರಿಸಿದಾಗ ಆರೋಪಿ ಆ ವಿಡಿಯೋಗಳನ್ನು ದೂರುದಾರರ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಹಂಚಿಕೊಳ್ಳುವುದಾಗಿ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಾಮ ವೇದಿಕೆಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now