--ಇಲ್ಲಿ ಜಾಹೀರಾತು--

110 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ

On: March 16, 2026 2:28 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಮೈಸೂರು:
ಹಳೆ ಮೈಸೂರು ಪ್ರದೇಶದ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110.44 ಅಡಿಗೆ ಕುಸಿದಿದೆ. ಆದರೂ ಮುಂದಿನ ಜೂನ್, ಜುಲೈವರೆಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
124.80 ಗರಿಷ್ಠ ಅಡಿ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ 110.44 ಅಡಿ ನೀರಿದೆ. 32.167 ಟಿಎಂಸಿಯಷ್ಟು ಸದ್ಯ ನೀರಿದ್ದು, ಈ ನೀರು ಮುಂದಿನ ಜೂನ್, ಜುಲೈ ತಿಂಗಳಿನವರೆಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಮಳೆ ಬಾರದಿದ್ದರೆ ಕೃಷಿ ಚಟುವಟಿಕೆಗೆ ನೀರು ಸಿಗುವ ಸಾಧ್ಯತೆ ಇಲ್ಲ. ಸದ್ಯಕ್ಕೆ ಕುಡಿಯುವ ನೀರಿನ ಜೊತೆಗೆ ಮಂಡ್ಯ ಜಿಲ್ಲೆಯ ರೈತರ ಬೇಸಿಗೆ ಬೆಳೆಗಳಿಗೂ ಸಹ ನೀರನ್ನು ಕಟ್ಟು ಪದ್ಧತಿಯಲ್ಲಿ ಪೂರೈಸಲಾಗುತ್ತಿದೆ.
ಕಳೆದ ವರ್ಷ ಉತ್ತಮ ಮಳೆ ಬಿದ್ದ ಪರಿಣಾಮ, ಕೆಆರ್‌ಎಸ್ ವರ್ಷದಲ್ಲಿ ಎರಡು ಬಾರಿ ಭರ್ತಿಯಾಗಿತ್ತು. ಜೊತೆಗೆ ಹಲವು ತಿಂಗಳು ಗರಿಷ್ಠ ಮಟ್ಟವನ್ನೇ ಕಾಯ್ದುಕೊಂಡಿತ್ತು. ಹೀಗಾಗಿ, ಈಗಲೂ ಸಹ ಡ್ಯಾಂನಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಸದ್ಯ ಈ ವರ್ಷ ಮೈಸೂರು, ಮಂಡ್ಯ, ಬೆಂಗಳೂರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now