--ಇಲ್ಲಿ ಜಾಹೀರಾತು--

ಗ್ಯಾಸ್ ಬಳಕೆ ಶೇ.13ರಷ್ಟು ಕುಸಿತ

On: April 20, 2026 2:22 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾರ್ಚ್ನಲ್ಲಿ ಎಲ್‌ಪಿಜಿ ಬಳಕೆ ಶೇ.13ರಷ್ಟು ಕುಸಿತ ಕಂಡಿದೆ. ಗ್ಯಾಸ್ ಪೂರೈಕೆಯಲ್ಲಿ ಯುದ್ಧದಿಂದ ಅಡಚಣೆ ಉಂಟಾಗಿರುವುದು ಎಲ್‌ಪಿಜಿ ಬಳಕೆ ತೀವ್ರ ಕುಸಿತಕ್ಕೆ ಕಾರಣವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಎಲ್‌ಪಿಜಿ 2.729 ದಶಲಕ್ಷ ಟನ್ ಬಳಕೆಯಾಗಿತ್ತು. ಆದರೆ, ಈ ವರ್ಷದ ಮಾರ್ಚ್ನಲ್ಲಿ 2.379 ದಶಲಕ್ಷ ಟನ್ ಬಳಕೆಯಾಗಿದೆ. ಪಿಪಿಎಸಿ ದತ್ತಾಂಶಗಳಿAದ ಮಾಹಿತಿ ಹೊರಬಿದ್ದಿದೆ. ಭಾರತ ತನ್ನ ಒಟ್ಟು ಬೇಡಿಕೆಯ ಎಲ್‌ಪಿಜಿಯಲ್ಲಿ ಶೇ.60ರಷ್ಟು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿ ಮೂಲಕವೇ ಬರಬೇಕಿದ್ದ ಎಲ್‌ಪಿಜಿ, ಪಶ್ಚಿಮ ಏಷ್ಯಾ ಸಂಘರ್ಷದಿAದ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆ ಎಲ್‌ಪಿಜಿ ಪೂರೈಕೆಯಲ್ಲಿ ನಿರಂತರ ವ್ಯತ್ಯಯವಾಗುತ್ತಿದೆ. ಎಲ್‌ಪಿಜಿ ಅಭಾವದ ಪರಿಣಾಮ ಗೃಹೇತರ ವಿಭಾಗಗಳ ಮೇಲೆ ಹೆಚ್ಚು ತೀವ್ರವಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now