
ಟೆಹ್ರಾನ್: ಅಮೆರಿಕ ಕೊಲ್ಲಿಯಲ್ಲಿ ಇರಾನ್ ಧ್ವಜ ಹೊತ್ತ ಸರಕು ಹಡಗನ್ನು ತಡೆದಿದೆ. ಟೌಸ್ಕಾ ಹಡಗನ್ನು ಅಮೆರಿಕದ ನೌಕಾಪಡೆ ನಿಲ್ಲಿಸುವಂತೆ ನೀಡಿದ ಎಚ್ಚರಿಕೆಗೆ ಸ್ಪಂದಿಸದ ಕಾರಣ ವಶಪಡಿಸಿಕೊಳ್ಳಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇದು ಕದನ ವಿರಾಮದ ಉಲ್ಲಂಘನೆ. ಸಶಸ್ತ್ರ ಕಡಲ್ಗಳ್ಳತನದ ಕೃತ್ಯಕ್ಕೆ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದೆ. ಪಾಕಿಸ್ತಾನದಲ್ಲಿ ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತೊಂದು ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿತ್ತು. ಈ ನಡುವೆಯೇ ಹಾರ್ಮುಜ್‌ನಲ್ಲಿ ಮತ್ತೆ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಜೋರಾಗಿದೆ.
ಕದನ ವಿರಾಮ ಒಪ್ಪಂದ ಮಾತುಕತೆಗೆ ಇರಾನ್ ನಕಾರ ವ್ಯಕ್ತಪಡಿಸಿದೆ. ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ. ಎರಡನೇ ಸಭೆಗೆ ಹಾಜರಾಗುವುದಿಲ್ಲ. ಇರಾನ್ ಬಂದರುಗಳ ಸುತ್ತಲೂ ನೌಕಾ ದಿಗ್ಬಂಧನ ಮುಂದುವರಿದಿದೆ. ಇದು ಕದನ ವಿರಾಮ ಒಪ್ಪಂದದ ಉಲ್ಲಂಘಿಸುತ್ತದೆ. ಈ ಹಿನ್ನೆಲೆ ಮಾತುಕತೆಗಳಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಇರಾನ್ ಸ್ಪಷ್ಟಪಡಿಸಿದೆ.
ಹಡಗಿಗೆ ಅಮೆರಿಕಾ ತಡೆ: ಮಾತುಕತೆಗೆ ಇರಾನ್ ತಿರಸ್ಕಾರ







