--ಇಲ್ಲಿ ಜಾಹೀರಾತು--

ವಿದ್ಯುತ್ ತಂತಿ ಸ್ಪರ್ಶಿಸಿ ಮಗು ಸಾವು

On: May 7, 2025 2:16 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ತುರುವೇಕೆರೆ: ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ವಿದ್ಯುತ್ತಂತಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ಮಗು ತಂತಿ ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ದೊಡ್ಡಗೊರಾ ಘಟ್ಟದಲ್ಲಿ ನಡೆದಿದೆ.
ದೊಡ್ಡಗೊರಾ ಘಟ್ಟದ ವಾಸಿ ಚಂದನ್ಶೆಟ್ಟಿಯವರ ನಾಲ್ಕು ವರ್ಷದ ಪೋಷಿತ್ಶೆಟ್ಟಿ ಯೇ ಮೃತಪಟ್ಟ ದುರ್ದೈವಿ, ಪೋಷಿತ್ಶೆಟ್ಟಿ ತನ್ನ ಮನೆಯ ಮುಂಭಾಗ ಆಟವಾಡುವ ವೇಳೆ ಮನೆಗೆ ಹೊಂದಿಕೊಂಡಿರುವ ತೋಟಕ್ಕೆ ಹಾಕಲಾಗಿದ್ದ ವಿದ್ಯುತ್ ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ತುಂಡಾಗಿ ಬಿದ್ದಿತ್ತು ಎಂದು ಹೇಳಲಾಗಿದೆ, ಆ ವೇಳೆ ಮಗು ತಿಳಿಯದೇ ತಂತಿ ಬೇಲಿ ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆ ನಡೆದ ಸ್ಥಳಕ್ಕೆ ಸಿಪಿಐ ಲೋಹಿತ್ ಕುಮಾರ್, ದಂಡಿನಶಿವರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೂರ್ತಿ, ಬೆಸ್ಕಾಂನ ಎಇಇ ಎನ್.ಸಿ.ರಾಜಶೇಖರ್, ಶಾಖಾಧಿಕಾರಿ ಜಾನ್ ಮಧುಕರ್ ಭೇಟಿ ನೀಡಿದ್ದರು.
ಚಂದನ್ಶೆಟ್ಟಿಯವರಿಗೆ ಪೋಷಿತ್ ಶೆಟ್ಟಿ ಒಬ್ಬನೇ ಮಗ ಎಂದು ತಿಳಿದು ಬಂದಿದೆ, ಗ್ರಾಮದ ಜನರು ಬೆಸ್ಕಾ ನ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮೃತ ಪೋಷಿತ್ ಶೆಟ್ಟಿ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಬೆಸ್ಕಾಂ ನಿಂದ ನೀಡಲಾಗುವುದು ಎಂದು ಬೆಸ್ಕಾಂ ಎಇಇ ಎನ್.ಸಿ.ರಾಜಶೇಖರ್ಭರವಸೆ ನೀಡಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now