--ಇಲ್ಲಿ ಜಾಹೀರಾತು--

ಅಪಘಾತದಲ್ಲಿ ಬೈಕ್ ಸವಾರರಿಬ್ಬರ ಸಾವು

On: June 16, 2025 2:02 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನೆಲಮಂಗಲ: ಕುಣಿಗಲ್ ಬೈಪಾಸ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವ ಡ್ಯಾನ್ಸರ್ ಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಪ್ರಜ್ವಲ್ (22, ಶ್ರೀರಾಂಪುರ ನಿವಾಸಿ) ಮತ್ತು ಸಹನ (21, ಕುರುಬರಹಳ್ಳಿ ನಿವಾಸಿ) ಎಂದು ಗುರುತಿಸಲಾಗಿದೆ.
ಪ್ರಜ್ವಲ್ ಮತ್ತು ಸಹನ ಇಬ್ಬರೂ ವೃತ್ತಿಪರ ಡ್ಯಾನ್ಸರ್ಗಳಾಗಿದ್ದು, ಕೆಲವು ವರ್ಷಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದರು. ಘಟನೆಯ ದಿನ, ಅವರು ಕುಣಿಗಲ್ ನಲ್ಲಿ ನಡೆದ ಒಂದು ಕಾರ್ಯಕ್ರಮದ ಹಣವನ್ನು ಸಂಗ್ರಹಿಸಲು ಬಂದಿದ್ದರು. ಹಣ ಪಡೆದು ಬೆಂಗಳೂರಿಗೆ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದಾಗ, ವೇಗವಾಗಿ ಬಂದ ಲಾರಿಯೊಂದು ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ತೀವ್ರತೆಯಿಂದ ಇಬ್ಬರೂ ಸ್ಥಳದಲ್ಲೇ ಮತಪಟ್ಟಿದ್ದಾರೆ.ಅಪಘಾತದ ಬಳಿಕ ಲಾರಿ ಚಾಲಕನನ್ನು ಮತ್ತು ವಾಹನವನ್ನು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಲಾರಿಯ ವೇಗವಾಗಿ ಚಲಿಸುವಿಕೆಯೇ ಈ ದುರಂತಕ್ಕೆ ಪ್ರಮುಖ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now