--ಇಲ್ಲಿ ಜಾಹೀರಾತು--

ಪಾನ್ ಗೆ ಗಾಂಜಾ ಬೆರೆಸಿ ಮಾರಾಟ- ಆರೋಪಿ ಅರೆಸ್ಟ್

On: July 19, 2025 2:50 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ದಾವಣಗೆರೆ: ಚಾಕೊಲೇಟ್ ಪಾನ್ ಗೆ ಗಾಂಜಾ ಬೆರೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಪಾನ್ ಅಂಗಡಿ ಮಾಲೀಕನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಪ್ಯಾರೆಲಾಲ್ ಅಲಿಯಾಸ್ ರಾಜು (38) ಬಂಧಿತ ಆರೋಪಿ. ದಾವಣಗೆರೆ ನಗರದ ರಾಮ್ ಆಂಡ್ ಕೋ ಸರ್ಕಲ್ ನಲ್ಲಿ ಪಾನ್ ಶಾಪ್ ಇಟ್ಟುಕೊಂಡಿದ್ದ. ಕಳೆದ ನಾಲ್ಕು ವರ್ಷಗಳಿಂದ ಪಾನ್ ಶಾಪ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಚಾಕೊಲೇಟ್ ನಲ್ಲಿ ಗಾಂಜಾ, ಚಾಕೊಲೇಟ್ ಪಾನ್ ಗೆ ಗಾಂಜಾ ಬೆರೆಸಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ತನ್ನ ಅಪ್ರಾಪ್ತ ಮಗನ ಕೈಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಪಾನ್ ಗಳನ್ನು ಕೊಟ್ಟು ಕಾಲೇಜುಗಳ ಬಳಿ ಮಾರಾಟ ಮಾಡಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ರಾಜು ನನ್ನು ಬಂಧಿಸಿದ್ದಾರೆ.
ಪ್ಯಾರೇಲಾಲ್ ಅಲಿಯಾಸ್ ರಾಜು ಉತ್ತರ ಪ್ರದೇಶದ ಅಲಹಾಬಾದ್ ನಿವಾಸಿ. ಗಾಂಜಾ ಮಿಶ್ರಿತ ಭೋಲೆ ಚಾಕೊಲೇಟ್ ಹೆಸರಿನ ಪಾನ್ ನನ್ನು ಉತ್ತರ ಪ್ರದೇಶದಲ್ಲಿ ಕೇವಲ 1-2 ರೂಪಾಯಿಗೆ ಮಾರಲಾಗುತ್ತದೆ. ದಾವಣಗೆರೆಯಲ್ಲಿ 50-60ರೂಪಾಯಿಗೆ ಆರೋಪಿ ಮಾರಾಟ ಮಾಡುತ್ತಿದ್ದ. ಗಾಂಜಾ ಮಿಶ್ರಿತ ಚಾಕೊಲೇಟ್ ನ್ನು ಮಕ್ಕಳು ಹಾಲು, ಜ್ಯೂಸ್ ಗಳಲ್ಲಿ ಬೆರೆಸಿ ಸೇವಿಸುತ್ತಿದ್ದರು. ಮಗನನ್ನೇ ಗಾಂಜಾ ಮಾರಾಟ ಕತ್ಯಕ್ಕೆ ಆರೋಪಿ ಬಳಸುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ ಪಿ.ಉಮಾ ಪ್ರಶಾಂತ್ ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now