--ಇಲ್ಲಿ ಜಾಹೀರಾತು--

19 ವರ್ಷದ ಯುವಕನ ಮದುವೆಯಾದ ಯುವತಿ ಯುವತಿಯ ವಿರುದ್ಧ ಕೇಸ್ ದಾಖಲು

On: September 20, 2025 2:42 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ರಾಜ್ಯದಲ್ಲೊಂದು ಅಪರೂಪದ ಮದುವೆ ಎನ್ನುವಂತೆ 19 ವರ್ಷದ ಯುವಕನನ್ನು ಯುವತಿಯೊಬ್ಬಳು ಮದುವೆಯಾಗಿದ್ದಳು. ಮನೆಯವರ ವಿರೋಧದ ನಡುವೆಯೂ ಈ ವಿವಾಹ ನಡೆದಿತ್ತು. ಆದರೇ ಇದೀಗ 19 ವರ್ಷದ ಯುವಕನನ್ನು ಬಾಲ್ಯ ವಿವಾಹವಾದಂತ ಯುವತಿಯ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಲ್ಲಿ ಪರಸ್ಪರ ಪ್ರೀತಿಸುತ್ತಿದ್ದ 19 ವರ್ಷದ ಸೌಮ್ಯ ಹಾಗೂ 19 ವರ್ಷದ ಯುವಕ ವಿವಾಹವಾಗಿದ್ದಾರೆ. ಇಬ್ಬರ ಮದುವೆಗೆ ಯುವತಿ ಸೌಮ್ಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದನ್ನು ತೆಕ್ಕಿಸದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಜುಲೈ 11 ರಂದು ಮಾಗಡಿಯ ದೇಗುಲದಲ್ಲಿ ಇಬ್ಬರಿಗೂ ವಿವಾಹವಾಗಿತ್ತು. ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ತುಂಬಿರಬೇಕು. ಹೀಗಿದ್ದರೂ 19 ವರ್ಷದ ಯುವತಿ ಮೇಜರ್ ಆಗಿದ್ದರೂ ಯುವಕನಿಗೆ 21 ವರ್ಷ ಮದುವೆಯಾಗಲೂ ಕಡ್ಡಾಯವಾಗಿದೆ. ಈ ನಿಯಮ ಮೀರಿ ವಿವಾಹವಾದಂತ ಯುವತಿಯ ವಿರುದ್ಧ ಇದೀಗ ಕುದೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now