--ಇಲ್ಲಿ ಜಾಹೀರಾತು--

ಆಟೋ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ಓರ್ವ ಸಾವು

On: February 2, 2026 2:37 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು: ಆಟೋ ಪಾರ್ಕಿಂಗ್ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾಗಿದ್ದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ತಡರಾತ್ರಿ ನಾಯಂಡಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಗುಣ (28) ಎಂಬಾತನನ್ನ ಹತ್ಯೆ ಮಾಡಲಾಗಿದ್ದು, ಆತನ ಸ್ನೇಹಿತ ವೇಲು ಎಂಬಾತ ಗಾಯಗೊಂಡಿದ್ದಾನೆ. ಪ್ರಕರಣ ಸಂಬಂಧ ವಿನೋದ್, ಅಜಿತ್, ಕುರ್ಮಾ ಮತ್ತು ದೀನ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಒಂದೇ ಏರಿಯಾ ನಿವಾಸಿಗಳಾಗಿದ್ದ ಗುಣ ಹಾಗೂ ವಿನೋದ್ ನಡುವೆ ಆಟೋ ನಿಲ್ಲಿಸುವ ವಿಚಾರಕ್ಕೆ ಎರಡು ದಿನಗಳ ಹಿಂದಷ್ಟೆ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ವಿನೋದ್, ಅಜಿತ್ ಹಾಗೂ ಲಂಬು ಕುರ್ಮರ್ ಸೇರಿ ಗುಣನ ಆಟೋ ಜಖಂಗೊಳಿಸಿದ್ದರು. ಈ ಪ್ರಕರಣ ಬ್ಯಾಟರಾಯನಪುರ ಠಾಣೆ ಮೆಟ್ಟಿಲೇರಿದ ಬಳಿಕ ಎರಡೂ ಕಡೆಯವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.
ಅದೇ ವಿಚಾರವಾಗಿ ತಡರಾತ್ರಿ ಪೊಲೀಸ್ ಠಾಣೆಗೆ ತೆರಳಿ ವಾಪಸ್ ಬಂದ ಗುಣ ಅವರ ಮೇಲೆ ಆರೋಪಿ ವಿನೋದ್ ಮತ್ತವನ ಕಡೆಯವರು ಮೇಲೆ ಮುಗಿ ಬಿದ್ದಿದ್ದಾರೆ. ಈ ವೇಳೆ ಗುಣನಿಗೆ ಚಾಕು ಇರಿಯಲಾಗಿದ್ದು, ಆತನ ಸ್ನೇಹಿತ ವೇಲು ಎಂಬಾತನಿಗೂ ಗಾಯಗಳಾಗಿದ್ದವು. ತಕ್ಷಣ ಗುಣನನ್ನ ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಇನ್ನು ಈ ಮೂವರು ಸಹ ಹತ್ಯೆ ಪ್ರಕರಣವೊಂದರ ಆರೋಪಿಗಳಾಗಿದ್ದವರು. ಅವರವರ ನಡುವೆಯೇ ಆರಂಭವಾದ ಗಲಾಟೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now