
ನವದೆಹಲಿ: ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಶನಿವಾರ ಕೇಂದ್ರ ಸರ್ಕಾರ ದಿಢೀರ್ ಎಂದು ಹೆಚ್ಚಿಸಿದೆ. 14.2 ಕೆಜಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ದೇಶಾದ್ಯಂತ 60 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ದೇಶದ ಮಹಿಳೆಯರಿಗೆ ಕೇಂದ್ರ ಶಾಕ್ ನೀಡಿದೆ.
19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯೂ 115 ರೂಪಾಯಿ ಹೆಚ್ಚಿಸಲಾಗಿದೆ, ಇದರಿಂದ ಹೋಟೆಲ್, ರೆಸ್ಟೋರೆಂಟ್ಗಳು ಮತ್ತು ಸಣ್ಣ ವಾಣಿಜ್ಯ ಸಂಸ್ಥೆಗಳ ಮೇಲೆ ಪರಿಣಾಮ ಬೀಳಲಿದೆ.
ಬೆಂಗಳೂರು ನಗರದಲ್ಲಿ ಸಬ್ಸಿಡಿ ಇಲ್ಲದ ಎಲ್ಪಿಜಿ ಸಿಲಿಂಡರ್ ಬೆಲೆ 14.2 ಕೆಜಿ ಸಿಲಿಂಡರ್ಗೆ 855.50 ರೂಪಾಯಿ ಆಗಿದೆ. ವಾಣಿಜ್ಯ ಬಳಕೆ ಇಂಧನ 19 ಕೆಜಿ ದರ 1,814 ರೂಪಾಯಿ ಆಗಿದೆ. ದೆಹಲಿಯಲ್ಲಿ 14.2 ಕೆಜಿ ಗೃಹ ಎಲ್ಪಿಜಿ ಸಿಲಿಂಡರ್ ಬೆಲೆ 853 ರೂಪಾಯಿಗಳಿಂದ 913 ರೂಪಾಯಿಗೆ ಏರಿಕೆಯಾಗಿದೆ. ಮುಂಬೈಯಲ್ಲಿ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಹೊಸ ಬೆಲೆ 852.50ರಿಂದ 912.50 ರೂಪಾಯಿಗೆ ಹೆಚ್ಚಾಗಿದೆ. ಕೊಲ್ಕತ್ತಾದಲ್ಲಿ 879ರಿಂದ 930 ರೂಪಾಯಿಗೆ, ಚೆನ್ನೈನಲ್ಲಿ 868.50 ರೂ.ಗಳಿಂದ 928.50 ರೂಪಾಯಿಗೆ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿAದಲೇ ಜಾರಿಗೆ ಬಂದಿದೆ.
ಈ ಹೆಚ್ಚಳವು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳಿಗೂ ಅನ್ವಯಿಸುತ್ತದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ1768.50ರಿಂದ 1,883 ರೂಪಾಯಿಗೆ ಏರಿಕೆಯಾಗಿದೆ. ಮುಂಬೈಯಲ್ಲಿ ಇದು 1720.50ರಿಂದ 1835 ರೂಪಾಯಿಗೆ ಹೆಚ್ಚಾಗಿದೆ. ಕೊಲ್ಕತ್ತಾದಲ್ಲಿ 1875.50ರಿಂದ 1990ಕ್ಕೆ, ಚೆನ್ನೈಯಲ್ಲಿ 1929ರಿಂದ 2043.50ಕ್ಕೆ ಏರಿಕೆಯಾಗಿದೆ. ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಏಪ್ರಿಲ್ 2025ರಿಂದ ಯಾವುದೇ ಬದಲಾವಣೆ ಆಗಿರಲಿಲ್ಲ.
ಗ್ಯಾಸ್ ಸಿಲಿಂಡರ್ ಬೆಲೆ 60 ರೂ. ವಾಣಿಜ್ಯ 115 ರೂ. ಹೆಚ್ಚಳ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


