--ಇಲ್ಲಿ ಜಾಹೀರಾತು--

ಭಾರತಕ್ಕೆ 45,000 ಮೆ.ಟನ್ ಗ್ಯಾಸ್ ಹೊತ್ತುತಂದ ಹಡಗು

On: March 16, 2026 2:24 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಗಾಂಧಿನಗರ:
ಇರಾಕ್ ಹಾರ್ಮುಜ್ ಜಲಸಂಧಿಯಿAದ ಬಿಡುಗಡೆಗೊಂಡಿದ್ದ ಶಿವಾಲಿಕ್ ಹಡಗು 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ಗುಜರಾತ್‌ನ ಮುಂದ್ರಾ ಬಂದರಿಗೆ ಬಂದು ತಲುಪಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಂದರು ಸಚಿವಾಲಯ, ನಿರೀಕ್ಷೆಯಂತೆ ಮಾ.16ರಂದು ಶಿವಾಲಿಕ್ ಹಡಗು ಭಾರತಕ್ಕೆ ಬಂದು ತಲುಪಿದೆ ಎಂದು ತಿಳಿಸಿದೆ. ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಮತ್ತು ಶಿವಾಲಿಕ್ ಎಂಬ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರುತ್ತಿವೆ. ಶಿವಾಲಿಕ್ ಮಾರ್ಚ್ 16ರಂದು ಮತ್ತು ನಂದಾ ದೇವಿ ಮಾರ್ಚ್ 17ರಂದು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು.
ಅಮೆರಿಕ ಇರಾನ್ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಲವಾರು ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್‌ಗಳು, ಹಾಸ್ಟೆಲ್‌ಗಳು ಮತ್ತು ಕೆಲವು ಕಂಪನಿಗಳು, ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಎಲ್‌ಪಿಜಿ ಸರಬರಾಜಲ್ಲಿ ವಿಳಂಬವಾದರೆ ಮತ್ತಷ್ಟು ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಇದರ ನಡುವೆ ಶಿವಾಲಿಕ್ ಹಡಗು ಭಾರತ ತಲುಪಿದೆ. ಮತ್ತೊಂದು ಹಡಗು ನಂದಾ ದೇವಿ ಮಂಗಳವಾರ ಕಾಂಡ್ಲಾ ಬಂದರಿಗೆ ಆಗಮಿಸಲಿದೆ. ಇದರಿಂದ ಗ್ಯಾಸ್ ಸಮಸ್ಯೆಗೆ ಕೊಂಚ ರಿಲೀಫ್ ಸಿಗಲಿದೆ.
ವಿದೇಶಾಂಗ ಸಚಿವ ಜೈಶಂಕರ್ ಮತ್ತು ಇರಾನಿನ ವಿದೇಶಾಂಗ ಸಚಿವರ ನಡುವಿನ ಚರ್ಚೆಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಮಾತುಕತೆ ಬಳಿಕ ಭಾರತದ ಹಡಗುಗಳಿಗೆ ಹಾರ್ಮೋಜ್ ಮಾರ್ಗವನ್ನು ಸುರಕ್ಷಿತವಾಗಿ ದಾಟಲು ಅನುಮತಿ ದೊರೆತಿತ್ತು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now