
ವಾಷಿಂಗ್ಟನ್: ಇರಾನ್ ನಮಗೆ ದೊಡ್ಡ ಗಿಫ್ಟ್ ಕೊಟ್ಟಿದೆ ಎಂದು ಹಾರ್ಮುಜ್ ಜಲಸಂಧಿ ಓಪನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಹೇಳಿಕೆ ನೀಡಿರುವ ಟ್ರಂಪ್, ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಂತಾಗಿದೆ. ಇರಾನ್ ಅದ್ಭುತವಾದ ಕೆಲಸ ಮಾಡಿದೆ. ನಮಗೆ ಇರಾನ್ ದೊಡ್ಡ ಉಡುಗೊರೆ ನೀಡಿದೆ. ಇರಾನ್ ಅಮೆರಿಕಕ್ಕೆ ತೈಲ, ಅನಿಲಕ್ಕೆ ಸಂಬAಧಿಸಿದ ಹಾರ್ಮುಜ್ ಓಪನ್ ಮಾಡಿ ಉಡುಗೊರೆ ನೀಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಅಮೆರಿಕದ ಅಧ್ಯಕ್ಷರು ಐದು ದಿನಗಳವರೆಗೆ ಮುಂದೂಡಿದ್ದಾರೆ. ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕಾಗಿ ಇರಾನ್ನೊಂದಿಗೆ ಮಾತುಕತೆಗೆ ನಿರ್ಧರಿಸಿದ್ದಾರೆ. ಆದರೆ, ಇರಾನ್ ಯಾವುದೇ ಕದನ ವಿರಾಮಕ್ಕೆ ಸಂಬAಧಿಸಿದ ಮಾತುಕತೆಗಳ ಭಾಗವಾಗುವುದನ್ನು ನಿರಾಕರಿಸಿದೆ ಎನ್ನಲಾಗಿದೆ.
ಹಾರ್ಮುಜ್ ಜಲಸಂಧಿ ಓಪನ್: ಟ್ರಂಪ್ ಸುಳಿವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


