
ನವದೆಹಲಿ: ದೇಶಾದ್ಯಂತ ಸೀಮೆ ಎಣ್ಣೆ ವಿತರಣೆ ಮಾಡುವ ನಿಯಮವನ್ನ ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮನೆ ಬಳಕೆಗೆ ಅಗತ್ಯವಾದ ಸೀಮೆ ಎಣ್ಣೆ ತಲುಪಿಸಲು ಈ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆ ಪ್ರಕಾರ ಸ21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆ ಎಣ್ಣೆ ವಿತರಿಸಲು ಅನುಮತಿ ನೀಡಿದೆ. ಮುಂದಿನ 60 ದಿನಗಳ ವರೆಗೆ ಪೆಟ್ರೋಲ್ ಪಂಪ್ಗಳು ಸೇರಿದಂತೆ ಚಿಲ್ಲರೆ ಮಾರಾಟದ ಮೂಲಕ ಸೀಮೆ ಎಣ್ಣೆ ವಿತರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅನುಮತಿ ನೀಡಿದೆ. ಮನೆಯ ಅಡುಗೆ ಉದ್ದೇಶಗಳಿಗಾಗಿ ಸೀಮೆಎಣ್ಣೆ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ತಿಳಿಸಿದೆ.
ಪೆಟ್ರೋಲ್ ಬಂಕ್ ಗಳಲ್ಲಿ ಸೀಮೆಎಣ್ಣೆಯೂ ಮಾರಾಟ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


