
ನವದೆಹಲಿ: ಭಾರತದ ಮತ್ತೆರಡು ಹಡುಗುಗಳು ಹಾರ್ಮುಜ್ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿವೆ. ಸುಮಾರು 94,000 ಟನ್ಗಳಷ್ಟು ಎಲ್ಪಿಜಿ ಹೊತ್ತ ಎರಡು ಭಾರತೀಯ ಹಡಗುಗಳು ಶೀಘ್ರದಲ್ಲೇ ಭಾರತವನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಪೆಟ್ರೋಲಿಯಂ ಸಚಿವಾಲಯ ನೀಡಿರುವ ಹೇಳಿಕೆಯಂತೆ, ಸುಮಾರು 94 ಸಾವಿರ ಟನ್ಗಳಷ್ಟು ಎಲ್ಪಿಜಿ ಸರಕು ಟ್ಯಾಂಕರ್ಗಳನ್ನು ಹೊತ್ತ 2 ಹಡಗುಗಳು ಹಾರ್ಮುಜ್ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿ ಭಾರತದ ತೀರಗಳತ್ತ ಸಾಗಿವೆ. ಟ್ಯಾಂಕರ್ ಮುಂಬೈಗೆ ತೆರಳುತ್ತಿದ್ದು, ಮಾರ್ಚ್ 31ರಂದು ಮುಂಬೈ ಬಂದರಿಗೆ ಬರುವ ನಿರೀಕ್ಷೆಯಿದೆ. ಇನ್ನೊಂದು ಎಲ್ಪಿಜಿ ಟ್ಯಾಂಕರ್ ಹೊತ್ತ ಹಡಗು ಏಪ್ರಿಲ್ 1ರಂದು ನವ ಮಂಗಳೂರು ಬಂದರಿಗೆ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಇದುವರೆಗೆ ಭಾರತದ 4 ಹಡಗುಗಳು ಹಾರ್ಮುಜ್ ದಾಟಿ ಬಂದಿವೆ.
ಹಾರ್ಮುಜ್ ದಾಟಿದ ಮತ್ತೆರಡು ಹಡಗು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


