
ಬಳ್ಳಾರಿ: ರೈಲ್ವೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ರೈಲಿನಲ್ಲಿ ಸಾಗಿಸುತ್ತಿದ್ದ 20.24 ಲಕ್ಷ ಮೌಲ್ಯದ 40.49 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ವಾಸ್ಕೋ ಡ ಗಾಮಾ ಶಾಲಿಮರ್ ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಶ್ವಾನದಳದ ಮೂಲಕ ದಾಳಿ ಮಾಡಿದ ರೈಲ್ವೇ ಪೊಲೀಸರು ಗಾಂಜಾ ವಶಕ್ಕೆ ಪಡೆದಿದ್ದಾರೆ. ರೈಲಿನ ಜನರಲ್ ಬೋಗಿಯ ಸೀಟ್ ಕೆಳಗಡೆ ಪ್ಯಾಕ್ ಮಾಡಿ ಗಾಂಜಾ ಇಟ್ಟಿದ್ದರು. ಶ್ವಾನದಳದ ಮೂಲಕ 19 ಬಂಡಲ್ ನಲ್ಲಿದ್ದ 20.24 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ತನಿಖೆ ಮುಂದುವರಿದಿದೆ
ರೈಲಿನಲ್ಲಿ 20.24 ಲಕ್ಷ ಮೌಲ್ಯದ ಗಾಂಜಾ ವಶ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


