
ವಾಷಿಂಗ್ಟನ್: ಇರಾನ್ ತನ್ನಲ್ಲಿ ಸಮೃದ್ಧವಾಗಿರುವ ಯುರೇನಿಯಂ ಹಸ್ತಾಂತರಿಸಲು ಒಪ್ಪಿಕೊಂಡಿದೆ. ಯುದ್ಧ ಕೊನೆಗೊಳ್ಳುವ ಸಮಯ ಹತ್ತಿರದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅವರು ನಮಗೆ ಪರಮಾಣು ಧೂಳನ್ನು ಹಿಂತಿರುಗಿಸಲು ಒಪ್ಪಿಕೊಂಡಿದ್ದಾರೆ. ನಾವು ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ಟ್ರಂಪ್ ತಿಳಿಸಿದರು.
ಅಮೆರಿಕ ಮತ್ತು ಇರಾನ್ ಅತ್ಯಂತ ಯಶಸ್ವಿ ಮಾತುಕತೆ ನಡೆಸುತ್ತಿವೆ. ಒಪ್ಪಂದವಾದರೆ ತೈಲ ಸಮಸ್ಯೆ ಬಗೆಹರಿಯುತ್ತದೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿ ಎಲ್ಲವೂ ಚೆನ್ನಾಗಿರುತ್ತದೆ ಎಂದು ಟ್ರಂಪ್ ಆಶಯ ವ್ಯಕ್ತಪಡಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಶಾಂತಿ ಮಾತುಕತೆಯಲ್ಲಿ ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು. ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬ ಅಮೆರಿಕದ ಷರತ್ತನ್ನು ಆಗ ಒಪ್ಪಿಕೊಳ್ಳಲು ಇರಾನ್ ನಿರಾಕರಿಸಿತ್ತು.
ಯುರೇನಿಯಂ ಹಸ್ತಾಂತರಕ್ಕೆ ಇರಾನ್ ಒಪ್ಪಿಗೆ: ಟ್ರಂಪ್








