
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾರ್ಚ್ನಲ್ಲಿ ಎಲ್ಪಿಜಿ ಬಳಕೆ ಶೇ.13ರಷ್ಟು ಕುಸಿತ ಕಂಡಿದೆ. ಗ್ಯಾಸ್ ಪೂರೈಕೆಯಲ್ಲಿ ಯುದ್ಧದಿಂದ ಅಡಚಣೆ ಉಂಟಾಗಿರುವುದು ಎಲ್ಪಿಜಿ ಬಳಕೆ ತೀವ್ರ ಕುಸಿತಕ್ಕೆ ಕಾರಣವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಎಲ್ಪಿಜಿ 2.729 ದಶಲಕ್ಷ ಟನ್ ಬಳಕೆಯಾಗಿತ್ತು. ಆದರೆ, ಈ ವರ್ಷದ ಮಾರ್ಚ್ನಲ್ಲಿ 2.379 ದಶಲಕ್ಷ ಟನ್ ಬಳಕೆಯಾಗಿದೆ. ಪಿಪಿಎಸಿ ದತ್ತಾಂಶಗಳಿAದ ಮಾಹಿತಿ ಹೊರಬಿದ್ದಿದೆ. ಭಾರತ ತನ್ನ ಒಟ್ಟು ಬೇಡಿಕೆಯ ಎಲ್ಪಿಜಿಯಲ್ಲಿ ಶೇ.60ರಷ್ಟು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿ ಮೂಲಕವೇ ಬರಬೇಕಿದ್ದ ಎಲ್ಪಿಜಿ, ಪಶ್ಚಿಮ ಏಷ್ಯಾ ಸಂಘರ್ಷದಿAದ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆ ಎಲ್ಪಿಜಿ ಪೂರೈಕೆಯಲ್ಲಿ ನಿರಂತರ ವ್ಯತ್ಯಯವಾಗುತ್ತಿದೆ. ಎಲ್ಪಿಜಿ ಅಭಾವದ ಪರಿಣಾಮ ಗೃಹೇತರ ವಿಭಾಗಗಳ ಮೇಲೆ ಹೆಚ್ಚು ತೀವ್ರವಾಗಿದೆ.
ಗ್ಯಾಸ್ ಬಳಕೆ ಶೇ.13ರಷ್ಟು ಕುಸಿತ







