
ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸಾವನ್ನಪ್ಪಿರುವ ದಾರುಣ ಘಟನೆ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಬನಶಂಕರಿಯ ತಬುಸುಮ್ ಖಾನ್ (24) ಮೃತ ದುರ್ದೈವಿ.
ಮುರುಗಮಲ್ಲಾದ ದರ್ಗಾಗೆ ಬಂದಿದ್ದ ಕುಟುಂಬಸ್ಥರು ಕೆರೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದರು. ತಾಯಿ ಬಟ್ಟೆಯನ್ನು ತರಲು ಹೋದಾಗ ಮಕ್ಕಳು ಕೆರೆಗೆ ಹೋಗಿದ್ದು ಮುಳುಗಿದ್ದಾರೆ. ಇದನ್ನ ಕಂಡ ತಾಯಿ ಕೂಡಲೇ ಕೆರೆಗೆ ದುಮುಕಿದ್ದಾರೆ. ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಅಲ್ಲೇ ಇದ್ದ ತಂದೆ ಹಾಗೂ ಸಂಬAಧಿ ಯುವಕರು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿ ಸಾವು





