--ಇಲ್ಲಿ ಜಾಹೀರಾತು--

ನೀಟ್ ಅಕ್ರಮ: ಮೂವರ ಬಂಧನ

On: May 15, 2026 2:12 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಜೈಪುರ: 2025ರಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಒಂದೇ ಕುಟುಂಬದ ಐವರು ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಪ್ರಕರಣದ ಆರೋಪಿಗಳಾಗಿದ್ದಾರೆ.
ನೀಟ್ ಪರೀಕ್ಷೆ ತೇರ್ಗಡೆಯಾಗಿದ್ದ ಒಂದು ವರ್ಷದ ಬಳಿಕ ಹಗರಣದಲ್ಲಿ ದಿನೇಶ್ ಮತ್ತು ಆತನ ಸಹೋದರ ಮಂಗಿಲಾಲ್, ಸೋದರಳಿಯ ವಿಕಾಸ್ ಅವರನ್ನು ಬಂಧಿಸಲಾಗಿದೆ.
ಬಿವಾಲ್ ಕುಟುಂಬದವರು ನಿಜಕ್ಕೂ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೇ ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯಲು ನೀಟ್ ಪತ್ರಿಕೆ ಸೋರಿಕೆ ಜಾಲವನ್ನು ಬಳಸಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲರೂ 10 ಮತ್ತು 12ನೇ ತರಗತಿಯಲ್ಲಿ ಸರಾಸರಿ ಶ್ರೇಣಿಗಳನ್ನು ಗಳಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸವಾಯಿ ಮಾಧೋಪುರ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದ ಮಂಗಿಲಾಲ್ ಮಗ ವಿಕಾಸ್, 10ನೇ ತರಗತಿಯಲ್ಲಿ ಶೇ.63 ಮತ್ತು 12ನೇ ತರಗತಿಯಲ್ಲಿ ಶೇ.55 ಅಂಕಗಳನ್ನು ಗಳಿಸಿದ್ದ. ನೀಟ್ 2024ರಲ್ಲಿ 720ಕ್ಕೆ ಕೇವಲ 270 ಅಂಕಗಳನ್ನು ಗಳಿಸಿದ್ದ. ಸಿಕಾರ್‌ನ ಕೋಚಿಂಗ್ ಸಂಸ್ಥೆಯಲ್ಲಿ ನಡೆದ 46 ಪರೀಕ್ಷೆಗಳಲ್ಲಿ ಆತನ ಸರಾಸರಿ ಅಂಕಗಳು 384 ಆಗಿತ್ತು. ನೀಟ್ 2025ರಲ್ಲಿ ಶೇ.85.11 ಅಂಕಗಳನ್ನು ಗಳಿಸಿದ್ದ. ದೌಸಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಮಂಗಿಲಾಲ್ ಅವರ ಮಗಳು ಪ್ರಗತಿ, 10 ನೇ ತರಗತಿಯಲ್ಲಿ ಶೇ.69 ಮತ್ತು 12 ನೇ ತರಗತಿಯಲ್ಲಿ ಶೇ.91 ಅಂಕಗಳನ್ನು ಗಳಿಸಿದ್ದಳು. ಪ್ರಗತಿ ನೀಟ್ 2025ರಲ್ಲಿ 89.08 ಅಂಕಗಳೊAದಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಳು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now