
ಹುಳಿಯಾರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿನ ಗೃಹ ಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಹುಳಿಯಾರಿನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಇಲ್ಲಿನ ಉರ್ದು ಸ್ಕೂಲ್ ರಸ್ತೆಯಲ್ಲಿನ ರಹೀಂ ಉನ್ನಿಸಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ, ಮನೆಯ ಮೊದಲ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕೆಲ ವಸ್ತುಗಳು ಹೊತ್ತಿ ಹೊಗೆ ಬರಲಾರಂಭಿಸಿದೆ, ದಾರಿಹೋಕರು ಮನೆ ಮೇಲ್ಭಾಗದಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿ ಮನೆಯಲ್ಲಿದ್ದವರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣ ಎಲ್ಲರೂ ಮೇಲೆ ಹೋಗಿ ನೋಡುವಷ್ಟರಲ್ಲಿ ಅಲ್ಲಿದ್ದ ಮಂಚ, ಹಾಸಿಗೆಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿತ್ತು, ಅಕ್ಕಪಕ್ಕದ ಯುವಕರೆಲ್ಲರೂ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರು, ಅಷ್ಟರಲ್ಲಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರಾದರೂ ಟಿವಿ, ವಾಷಿಂಗ್ ಮಿಷಿನ್, ಬೀರು, ಅದರಲ್ಲಿದ್ದ ಬಟ್ಟೆ, ಒಡದೆ, ಹಣ ಎಲ್ಲರೂ ಸುಟ್ಟು ಕರಕಲಾಗಿದೆ.
ಅಲ್ಲದೆ ಮನೆಯ ಮೇಲ್ಚಾವಣಿಯ ತೀರು, ಶೀಟು ಎಲ್ಲರೂ ಸುಟ್ಟು ಹೋಗಿದೆ, ಸ್ಥಳಕ್ಕೆ ಬೆಸ್ಕಾಂ ಹಾಗೂ ಪಪಂ ಅಧಿಕಾರಿಗಳು ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ.








