
ಬೆಂಗಳೂರು: ರಾಜ್ಯದಲ್ಲಿ ರಸ್ತೆ ದುರಸ್ತಿ ವಿಳಂಬ, ಅವೈಜ್ಞಾನಿಕ ಹಂಪ್ ಹಾಗೂ ಗುಂಡಿಯಿಂದಾಗಿ ಮಗು ಮೃತಪಟ್ಟಿದೆ.
ಮಹದೇವಪುರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದಾಗಿ ಭೀಕರ ಅಪಘಾತ ಸಂಭವಿಸಿದೆ. ಹಿಂದಿನಿಂದ ಬಂದ ಕಾರ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಮಗು ಕೆಳಕ್ಕೆ ಬಿದ್ದಿದೆ.
ಎರಡು ವರ್ಷದ ಕಂದಮ್ಮ ತ್ರಿಶೂಲ್ ತಲೆಯ ಮೇಲೆ ಕಾರು ಹರಿದಿದ್ದು, ಮಗು ಸ್ಥಳದಲ್ಲಿಯೇ ಮತಪಟ್ಟಿದೆ. ಈ ಅಪಘಾತದಿಂದ ಜನರು ರೊಚ್ಚಿಗೆದ್ದಿದ್ದು, ಸ್ಥಳದಲ್ಲಿಯೇ ಪ್ರತಿಭಟನೆ ಮಾಡಿದ್ದಾರೆ. ಅರ್ಧಂಬರ್ಧ ಕೆಲಸ ಮಾಡಿ ಬಿಟ್ಟು ಈ ರೀತಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸ್ಥಳೀಯರು ಗರಂ ಆಗಿದ್ದಾರೆ.
Author
Post Views: 490







