
ಬೆಂಗಳೂರು: ದೆಹಲಿಗೆ ತೆರಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಪರವಾಗಿ ನಾವಿದ್ದೇವೆ. ಅವರು ನಾಳೆಯೇ ಬಂದರೂ ಏನೂ ತೊಂದರೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ದೆಹಲಿಯಲ್ಲೇ ಉಳಿದಿರುವ ವಿಚಾರವಾಗಿ ಪ್ರತಿಕ್ರಿಸಿದರು. ಡಿಸಿಎಂ ಪರವಾಗಿ ಇಲ್ಲಿ ನಾವಿದ್ದೇವೆ. ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಎಂದರು. ಭಾನುವಾರ ದೆಹಲಿಗೆ ಡಿ.ಕೆ ಶಿವಕುಮಾರ್ ತೆರಳಿದ್ದರು. ಇಂದು ಸೋಮವಾರ ದೆಹಲಿಯಿಂದ ಅವರು ವಾಪಸ್ ಆಗಬೇಕಿತ್ತು. ಇಂದು ಕೂಡಾ ದೆಹಲಿಯಲ್ಲಿರಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Author
Post Views: 186







