--ಇಲ್ಲಿ ಜಾಹೀರಾತು--

ಗ್ಯಾಸ್ ಬುಕ್ಕಿಂಗ್ ಅವಧಿ ಬದಲಾವಣೆ ಆಗಿಲ್ಲ

On: March 25, 2026 2:19 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ: ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಯಾಗಿದೆ ಎಂಬ ವರದಿ ಸರಿಯಲ್ಲ. ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಕುರಿತು ಇಂಡಿಯನ್ ಆಯಿಲ್ ಕಂಪನಿ ಪೋಸ್ಟ್ ಹಂಚಿಕೊಂಡಿದ್ದು, ಎಲ್‌ಪಿಜಿ ರಿಫೀಲ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಗಳಾಗಿವೆ ಎಂಬ ವರದಿಗಳು ತಪ್ಪಾಗಿವೆ. ಸದ್ಯ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ದೇಶಾದ್ಯಂತ ಎಲ್‌ಪಿಜಿ ಸರಬರಾಜಿನಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಸ್ಟಾಕ್ ಇದೆ ಎಂದು ಸರ್ಕಾರ ತಿಳಿಸಿದೆ.
ಪಿಎಂಯುವೈ (ಉಜ್ವಲ್ ಗ್ಯಾಸ್) 45 ದಿನ, ನಗರ ಪ್ರದೇಶಕ್ಕೆ 25 ದಿನ ಹಾಗೂ ಗ್ರಾಮೀಣ ಭಾಗಕ್ಕೆ 45 ದಿನ ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಜನರು ಅಧಿಕೃತವಾಗಿ ಕಂಪನಿಗಳಿಂದ ಬರುವ ಮಾಹಿತಿಗಳ ಮೇಲೆ ಮಾತ್ರ ಗಮನಹರಿಸಿ. ಗಾಬರಿಯಲ್ಲಿ ಗ್ಯಾಸ್ ಬುಕ್ ಮಾಡಬೇಡಿ ಎಂದು ತಿಳಿಸಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now