--ಇಲ್ಲಿ ಜಾಹೀರಾತು--

ಹೈಕಮಾಂಡ್ ತೀರ್ಮಾನದವರೆಗೂ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ

On: March 25, 2026 2:22 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಬೆಂಗಳೂರು:
ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುವವರೆಗೂ ನಾನೇ ರಾಜ್ಯದ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಸದನದಲ್ಲಿ ಬಜೆಟ್ ಉತ್ತರ ವೇಳೆ ಡಿಕೆಶಿ ಹೆಸರು ಹಾಗೂ ಸ್ಪೀಕರ್ ಖಾದರ್ ಫೋಟೋ ಸೆಷನ್ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರ ಕಾಲೆಳೆದರು. ವಿಪಕ್ಷಗಳ ಲೇವಡಿಗೆ ಉತ್ತರಿಸಿದ ಸಿಎಂ, ನಮ್ಮಲ್ಲಿ ಎಲ್ಲ ಶಾಸಕರೂ ಸಿಎಂ ಹುದ್ದೆಗೆ ಅರ್ಹರು. ಯಾರೇ ಸಿಎಂ ಆದರೂ ನನಗೆ ಖುಷಿಯಾಗುತ್ತದೆ. ಹೈಕಮಾಂಡ್ ಎಲ್ಲಿಯವರೆಗೆ ಇರು ಅಂತಾರೋ, ಅಲ್ಲೀವರೆಗೂ ಖಾದರ್ ಸ್ಪೀಕರ್ ಆಗಿರುತ್ತಾರೆ. ವಿಪಕ್ಷಗಳು ಏನೇ ಕಿತಾಪತಿ ಮಾಡಿದರೂ ಖಾದರ್ ಮನ್ನಣೆ ಕೊಡಲ್ಲ. ಅವರು ಸಚಿವರಾದರೆ ಸಂತೋಷವೇ. ಕನಸು ಎಲ್ಲರಿಗೂ ಇದೆ. ಅಶೋಕ್‌ಗೂ ಸಿಎಂ ಆಗೋ ಕನಸಿದೆ. ಆದರೆ ಅದಕ್ಕೆ ವಿಜಯೇಂದ್ರ ಅವಕಾಶ ಕೊಡಲ್ಲ. ಅಶೋಕ್ ಸಿಎಂ ಆದರೂ ಸಂತೋಷನೇ, ಬೆಲ್ಲದ್ ಆದರೂ ಸಂತೋಷ ಎಂದು ಸಿದ್ದರಾಮಯ್ಯ ಕಾಲೆಳೆದರು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now