--ಇಲ್ಲಿ ಜಾಹೀರಾತು--

ರೂಪಾಯಿ ದಾಖಲೆ ಕುಸಿತ

On: March 30, 2026 2:12 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ದಿನೇ ದಿನೇ ಡಾಲರ್ ಮುಂದೆ ಪಲ್ಟಿಯಾಗುತ್ತಿರುವ ರೂಪಾಯಿ ಮೌಲ್ಯವನ್ನು ವೃದ್ಧಿಸಲು ಆರ್‌ಬಿಐ ಮಧ್ಯಪ್ರವೇಶ ಮಾಡಿದರೂ ಮತ್ತೆ ಕುಸಿದಿದೆ. ಮೊದಲ ಬಾರಿಗೆ 1 ಡಾಲರ್ ಮೌಲ್ಯ 95 ರೂ.ಗಳ ಗಡಿಯನ್ನು ದಾಟಿದೆ.
ಎಲ್ಲಾ ಬ್ಯಾಂಕುಗಳು ಪ್ರತಿ ವ್ಯವಹಾರದ ದಿನದ ಅಂತ್ಯಕ್ಕೆ ತಮ್ಮ ಎನ್‌ಒಪಿ-ಐಎನ್ ಆರ್ ಅನ್ನು ಗರಿಷ್ಠ 100 ಮಿಲಿಯನ್ ಡಾಲರ್‌ಗೆ ಮಿತಿಗೊಳಿಸಬೇಕು ಎಂದು ಆರ್‌ಬಿಐ ನಿರ್ದೇಶನ ನೀಡಿದೆ. ಈ ಹೊಸ ನಿಯಮವನ್ನು ಪಾಲಿಸಲು ಬ್ಯಾಂಕ್‌ಗಳಿಗೆ ಏಪ್ರಿಲ್ 10 ರವರೆಗೆ ಗಡುವು ನೀಡಲಾಗಿದೆ. ಆರ್‌ಬಿಐ ಈ ನಿರ್ಧಾರದ ಬೆನ್ನಲ್ಲೇ ರೂಪಾಯಿ ಮೌಲ್ಯ ಸೋಮವಾರ ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59ಕ್ಕೆ ತಲುಪಿತ್ತು. ಬೆಳಗ್ಗೆ ಏರಿಕೆಯಾಗಿ ನಂತರ ರೂಪಾಯಿ ಮೌಲ್ಯ ಕುಸಿಯಲು ಆರಂಭವಾಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ 1 ಡಾಲರ್ ಮುಂದೆ 95.13 ರೂ.ನಲ್ಲಿ ವ್ಯವಹಾರ ನಡೆಸುತ್ತಿತ್ತು. ಡಾಲರ್ ಮುಂದೆ ರೂಪಾಯಿ ಮೌಲ್ಯ 95 ಡಾಲರ್‌ಗೆ ಕುಸಿದಿರುವುದು ಇದೇ ಮೊದಲು.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now