--ಇಲ್ಲಿ ಜಾಹೀರಾತು--

ಹಾರ್ಮುಜ್ ದಾಟಲು ಸುಂಕ ಸಂಗ್ರಹ

On: March 31, 2026 2:11 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ಅಮೆರಿಕ-ಇಸ್ರೇಲ್ ಸೇರಿದಂತೆ ಶತೃ ದೇಶದ ಹಡಗುಗಳಿಗೆ ಇರಾನ್ ನಿಷೇಧ
ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಸುಂಕ ಸಂಗ್ರಹಿಸುವ ಹೊಸ ಯೋಜನೆಗೆ ಇರಾನ್ ಸಂಸತ್ತಿನ ಭದ್ರತಾ ಸಮಿತಿ ಅನುಮೋದನೆ ನೀಡಿದೆ. ಕೆಲವು ದೇಶಗಳ ಹಡುಗಳಿಂದ ಸುಂಕ ಸಂಗ್ರಹಿಸಲಾಗುತ್ತದೆ. ಆದರೆ, ಶತೃ ದೇಶಗಳ ಹಡಗುಗಳ ಮೇಲೆ ನಿರ್ಬಂಧವನ್ನು ಹೇರಲು ಇರಾನ್ ಸರ್ಕಾರ ಮುಂದಾಗಿದೆ.
ಈ ಯೋಜನೆಯು ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ರಿಯಾಲ್ ಆಧಾರಿತ ಟೋಲ್ ವ್ಯವಸ್ಥೆಯನ್ನ ಪರಿಚಯಿಸುತ್ತದೆ. ಇದು ಕಡಲ ಭದ್ರತೆ, ಹಡಗುಗಳ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಜಲಸಂಧಿಯ ಮೂಲಕ ಹಡಗುಗಳ ಸಾಗಣೆಯನ್ನ ನಿಯಂತ್ರಿಸುವ ಹಣಕಾಸು ಕಾರ್ಯವಿಧಾನವಾಗಿದೆ. ಇದು ಇರಾನ್‌ನ ಮಿತ್ರರಾಷ್ಟ್ರಗಳಿಗಷ್ಟೇ ಅನ್ವಯವಾಗಲಿದೆ.
ಹಡಗುಗಳಿಂದ ಸುಂಕ ಸಂಗ್ರಹ ಯೋಜನೆಯಿಂದ ಅಮೆರಿಕ ಮತ್ತು ಇಸ್ರೇಲಿ ಹಡಗುಗಳನ್ನ ಹೊರಗಿಡಲಾಗಿದೆ. ಏಕೆಂದರೆ ಇರಾನ್ ಶತ್ರು ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನ ನಿಷೇಧಿಸಲಾಗಿದೆ. ಇರಾನ್‌ನ ಈ ಯೋಜನೆಯು ಹಾರ್ಮುಜ್ ಜಲಸಂಧಿ ನಿರ್ವಹಣೆಗೆ ಕಾನೂನು ಚೌಕಟ್ಟು ರೂಪಿಸುವ ಜೊತೆಗೆ ಅದರ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಗೆ ಒಮನ್ ಕೂಡ ಸಹಕಾರ ನೀಡಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now