--ಇಲ್ಲಿ ಜಾಹೀರಾತು--

ಮೋದಿಗೆ ಜೈ: ದೀದಿಗೆ ಬೈ ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ ಬಿಜೆಪಿ ತೆಕ್ಕೆಗೆ ಕೇರಳದಲ್ಲಿ ಕಾಂಗ್ರೆಸ್ ಕಮಾಲ್, ತಮಿಳುನಾಡು ಟಿವಿಕೆ ಪಾಲು

On: May 4, 2026 2:40 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕಮಾಲ್ ಮಾಡಿದೆ. 5 ರಾಜ್ಯಗಳಲ್ಲಿ 3ರಲ್ಲಿ ಜಯಗಳಿಸುವ ಮೂಲಕ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಣೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಭರ್ಜರಿ ಜಯಗಳಿಸುವ ಮೂಲಕ ದೀದಿಗೆ ಶಾಕ್ ನೀಡಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ಟಿಎಂಸಿ 15 ವರ್ಷಗಳ ನಂತರ ಹೀನಾಯ ಸೋಲುಕಂಡಿದೆ. ಈ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮುಖಭಂಗವಾಗಿದೆ.
ತಮಿಳುನಾಡಿನ 234 ಕ್ಷೇತ್ರಗಳಲ್ಲಿ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತ ಪಕ್ಷ ಡಿಎಂಕೆ 72 ಮತ್ತು ಎಡಿಎಂಕೆ 54 ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿವೆ. ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ. ವಿಜಯ್ ಅವರಿಗೆ ಸರ್ಕಾರ ರಚಿಸಲು 10 ಸ್ಥಾನಗಳ ಕೊರತೆ ಇದೆ. ಈಗಾಗಲೇ ವಿಜಯ್ ಅವರ ತಂದೆ ಕಾಂಗ್ರೆಸ್ ಜೊತೆ ಕೈಜೋಡಿಸಲು ಆಹ್ವಾನ ನೀಡಿದ್ದಾರೆ.
ಅಸ್ಸಾಂನಲ್ಲಿ ಆಡಳಿತ ವಿರೋಧಿ ಅಲೆ ನಡುವೆಯೂ ಬಿಜೆಪಿ 102 ಸ್ಥಾನ ಪಡೆದು ತನ್ನ ಸರ್ಕಾರವನ್ನು ಉಳಿಸಿಕೊಂಡಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ಕೇವಲ 21 ಸ್ಥಾನ ಗಳಿಸಿದೆ. ಪುದುಚೇರಿಯಲ್ಲಿ ಎನ್’ಡಿಎ ಮೈತ್ರಿ ಕೂಟ ಜಯಗಳಿಸಿದೆ.
ಕೇರಳದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಗಳಿಸಿದೆ. ಆಡಳಿತ ಪಕ್ಷ ಯುಡಿಎಫ್ ಅಧಿಕಾರ ಕಳೆದುಕೊಂಡಿದೆ.

ಪಶ್ಚಿಮ ಬಂಗಾಳ 293
ಬಿಜೆಪಿ-202
ಟಿಎಂಸಿ- 85
ಕಾಂಗ್ರೆಸ್- 2
ಕಮ್ಯೂನಿಸ್ಟ್- 1
ಇತರೆ-3
 
ತಮಿಳುನಾಡು 234
ಟಿವಿಕೆ 110
ಡಿಎಂಕೆ 71
ಎಡಿಎಂಕೆ 54

ಅಸ್ಸಾಂ 126
ಬಿಜೆಪಿ 102
ಕಾಂಗ್ರೆಸ್ 21
ಇತರೆ- 3

ಪುದುಚೇರಿ-30
ಎನ್’ಡಿಎ- 17
ಐಎನ್’ಡಿಎ- 6
ಟಿವಿಕೆ- 3
ಇತರೆ- 4

ಕೇರಳಂ-140
ಎಲ್‌ಡಿಎಫ್- 35
ಯುಡಿಎಫ್- 100
ಬಿಜೆಪಿ- 3
ಇತರೆ-2

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now