--ಇಲ್ಲಿ ಜಾಹೀರಾತು--

ಗೂಗಲ್ ಎಂಜಿನ್ ಡೌನ್

On: May 12, 2026 2:22 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now


ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ಮಂಗಳವಾರ ಬೆಳಿಗ್ಗೆ 9:48ರಿಂದ ಗೂಗಲ್ ಸೇವೆಗಳಲ್ಲಿ ವ್ಯತ್ಯಯ ಆಗಿತ್ತು. ದೇಶದ ಹಲವು ಭಾಗಗಳ ಬಳಕೆದಾರರು ಗೂಗಲ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದರು.
ಸೇವಾ ಸ್ಥಗಿತಗಳನ್ನು ಟ್ರ್ಯಕ್ ಮಾಡುವ ಡೌನ್‌ಡೆಕ್ಟರ್ ಪ್ರಕಾರ, ಬೆಳಿಗ್ಗೆ 10:23ರ ವೇಳೆಗೆ 3,665ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ. ಗೂಗಲ್ ಸರ್ಚ್ ಸೇರಿದಂತೆ ಹಲವು ಗೂಗಲ್ ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ತಿಳಿಸಿದ್ದಾರೆ.
ಗೂಗಲ್ ಸೇವೆಗಳು ಡೌನ್ ಆಗಿದೆಯೇ ಎಂದು ತಿಳಿದುಕೊಳ್ಳಲು ಬಳಕೆದಾರರು ಡೌನ್ ಡಿಟೆಕ್ಟರ್ ವೆಬ್‌ಸೈಟ್ ಅಥವಾ ಗೂಗಲ್‌ನ ಅಧಿಕೃತ ಸ್ಟೇಟಸ್ ಡ್ಯಾಶ್‌ಬೋರ್ಡ್ ಪರಿಶೀಲಿಸಬಹುದು. ಅಲ್ಲದೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಹಲವರು ಸಮಸ್ಯೆ ಕುರಿತು ಪೋಸ್ಟ್ ಮಾಡುತ್ತಿದ್ದಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now