ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ 3 ವರ್ಷ ತುಂಬುತ್ತಿರುವ ಹೊತ್ತಲ್ಲೇ ಫಲಾನುಭವಿಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ.
ಗೃಹಲಕ್ಷ್ಮೀಯರು ಪರಿಶೀಲನೆಗೆ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲಿಯೇ ಶಾಕ್ ಎದುರಾಗಿದೆ. ಮರು ಪರಿಶೀಲನೆ ಸರ್ವೆ ಆರಂಭವಾದರೆ ಆ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ದುಡ್ಡು ಬರೋದು ಡೌಟ್. ಸರ್ವೆ ಆರಂಭವಾಗಿ ಅನರ್ಹರನ್ನ ಪತ್ತೆ ಹಚ್ಚಿದ ಬಳಿಕ ಗೃಹಲಕ್ಷ್ಮಿ ಹಣ ಪಾವತಿ ಆಗಲಿದೆ. ಹೀಗಾಗಿ ಒಂದು ತಿಂಗಳ ಒಳಗೆ ಸರ್ವೆ ಮುಗಿಸಲು ಸರ್ಕಾರ ಸೂಚನೆ ನೀಡಲಿದೆ. ಆದರೆ ಒಂದೇ ತಿಂಗಳಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.








