ಪ್ರಾಣ ತ್ಯಾಗಕ್ಕೂ ಸಿದ್ಧ: ಇರಾನ್ ಅಧ್ಯಕ್ಷ ತಿರುಗೇಟು

ಟೆಹರಾನ್: ಯುದ್ಧದಲ್ಲಿ ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ಸ್ವಯಂಪ್ರೇರಿತರಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಘೋಷಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧ ತೆರವುಗೊಳಿಸದಿದ್ದರೆ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಗೆ ಮಸೌದ್ ಪೆಜೆಶ್ಕಿಯಾನ್ ತಿರುಗೇಟು ನೀಡಿದ್ದಾರೆ. 14 ಮಿಲಿಯನ್‌ಗಿಂತಲೂ ಹೆಚ್ಚು ಇರಾನಿನ ಜನರು ತಮ್ಮ ಪ್ರಾಣವನ್ನು ತ್ಯಾಗಮಾಡಲು ಸಿದ್ಧರಿದ್ದಾರೆ. ನಾನು ಕೂಡ ಇರಾನ್‌ಗಾಗಿ ನನ್ನ ಪ್ರಾಣ ತ್ಯಾಗಕ್ಕೆ … Read more

ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಬೆಂಗಳೂರು: ಬಸವಜಯ ಮೃತ್ಯುಂಜಯ ಸ್ವಾಮೀಜಿ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಬೆಂಗಳೂರಿನ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ಮಂಗಳವಾರ ದೂರು ನೀಡಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗ ಉಪ ಪೊಲೀಸ್ ಆಯುಕ್ತರು ಹಾಗೂ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವ ಮಹಿಳಾ ಆಯೋಗ ಕ್ರಮಕ್ಕೆ ಸೂಚಿಸಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನನ್ನ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದು, ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ … Read more

ಎಲ್‌ ಪಿಜಿ ಬದಲಿಗೆ ಪೆಟ್ರೋಲ್ ಬಳಸಿ: ಕೇಂದ್ರ ಸಚಿವ ಜೋಷಿ

ದಾವಣಗೆರೆ: ಪೆಟ್ರೋಲ್ ಸದಾಕಾಲ ಲಭ್ಯವಿರುವ ಇಂಧನ. ಸಮಸ್ಯೆ ಬಗೆಹರಿಯುವ ವರೆಗೆ ಆಟೊ ಚಾಲಕರು ಎಲ್‌ಪಿಜಿ ಬದಲಿಗೆ ಪೆಟ್ರೋಲ್ ಬಳಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ದೇಶದಲ್ಲಿ ಸುಮಾರು 70 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ. ನಿರಂತರವಾಗಿ ತೈಲ ಪೂರೈಕೆ ಆಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ವಾಣಿಜ್ಯ ಸಿಲಿಂಡರ್‌ಗಳ ವಿತರಣೆಯನ್ನು ಶೇ,70ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲೇ ಶೇ.60ರಷ್ಟು ಎಲ್‌ಪಿಜಿಯನ್ನು ಉತ್ಪಾದಿಸಲಾಗುತ್ತಿದೆ. ಶೇ 40ರಷ್ಟು ಆಮದು … Read more

ಆಟೋ ಎಲ್‌ಪಿಜಿ ಪೂರೈಕೆ ಸಮಸ್ಯೆ: 10ರಂದು ಸಭೆ-ಸಚಿವ ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಪೂರೈಕೆ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಏಪ್ರಿಲ್ 10ರಂದು ಸಭೆ ಕರೆಯುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೋಮವಾರ ತಿಳಿಸಿದರು. ಕೆಲವು ಖಾಸಗಿ ತೈಲ ಕಂಪನಿಗಳು ವಾಹನಗಳಿಗೆ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಬೆಲೆಯನ್ನು ಹೆಚ್ಚಿಸಿವೆ. ಖಾಸಗಿ ಇಂಧನ ಕೇಂದ್ರಗಳಲ್ಲಿ ಬೆಲೆಗಳು ಹೆಚ್ಚಾದ ಕಾರಣ ಹೆಚ್ಚಿನ ಜನರು ಸಾರ್ವಜನಿಕ ವಲಯದ ಇಂಧನ ಬಂಕ್ ಗಳಿಗೆ ಹೋಗುತ್ತಿದ್ದಾರೆ. ಇದರಿಂದ ಅಲ್ಲಿ ಸರತಿ ಸಾಲುಗಳು ಕಂಡುಬರುತ್ತವೆ ಎಂದು ಅವರು ಹೇಳಿದರು. ಬೆಂಗಳೂರು ಮತ್ತು ರಾಜ್ಯದ ಇತರ ಹಲವಾರು … Read more

ಯುದ್ಧ ನಷ್ಟ ಪರಿಹಾರ ನೀಡಿದರೆ ಹಾರ್ಮುಜ್ ಓಪನ್

ಡೊಡ್ಡಣ್ಣನ ಡೆಡ್‌ ಲೈನ್‌ ಗೆ ಇರಾನ್ ತಿರುಗೇಟು ಟೆಹ್ರಾನ್: ವಿಶ್ವದ ದೊಡ್ಡಣ್ಣ ಟ್ರಂಪ್ ಡೆಡ್‌ಲೈನ್‌ಗೆ ಇರಾನ್ ಕೂಡ ತನ್ನದೇ ದಾಟಿಯಲ್ಲಿ ಕೌಂಟರ್ ನೀಡಿದೆ. ಯುದ್ಧದಿಂದಾಗಿರುವ ನಷ್ಟ ಪರಿಹಾರ ನೀಡದೆ ಹಾರ್ಮುಜ್ ಜಲಸಂಧಿ ತೆರೆಯುವ ಮಾತಿಲ್ಲ ಎಂದು ಅಮೆರಿಕಗೆ ಇರಾನ್ ತಿರುಗೇಟು ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್ ಹಿಂದೆ … Read more

ರಾಜ್ಯಕ್ಕೆ ಕೇಂದ್ರ ಕನಿಷ್ಠ ಗ್ಯಾಸ್ ಪೂರೈಸುತ್ತಿಲ್ಲ: ಪರಮೇಶ್ವರ್

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡದ ಕಾರಣ ರಾಜ್ಯದಲ್ಲಿ ಸಮಸ್ಯೆ ಹೆಚ್ಚಾಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಆರೋಪಿಸಿದರು. ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ. ನಮ್ಮ ರಾಜ್ಯಕ್ಕೆ ಕೊಡಬೇಕಾದ ಅಲಾಟ್‌ಮೆಂಟ್ ನೀಡಬೇಕು. ಯುದ್ದದಿಂದ ಎಲ್ಲಾರಿಗೂ ತೊಂದರೆ ಆಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಅನಿಲ ಪೂರೈಕೆ ಮಾಡಿಲ್ಲ. ಕನಿಷ್ಠ ಪೂರೈಕೆಯನ್ನಾದರೂ ಮಾಡಬೇಕಲ್ಲವೇ? ಅದಕ್ಕಾಗಿ ಸಮಸ್ಯೆ ಆಗಿದೆ. ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ … Read more

ರೌಡಿಶೀಟರ್ ಹತ್ಯೆ: ಮತ್ತಿಬ್ಬರು ಗಂಭೀರ

ಮಂಡ್ಯ: ಹುಟ್ಟುಹಬ್ಬದ ಮಾರನೇ ದಿನವೇ ಯುವಕನನ್ನು ಹತ್ಯೆ ಮಾಡಿರುವ ಘಟನೆ ಮದ್ದೂರಿನಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಯಶ್ವಂತ್ (19) ಕೊಲೆಯಾದ ಯುವಕ. ಮದ್ದೂರಿನ ಕೊಲ್ಲಿ ವೃತ್ತದ ಸೌದೆ ಡಿಪೋ ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ವೇಳೆ ಯಶ್ವಂತ್, ಸಚಿನ್ ಹಾಗೂ ದರ್ಶನ್ ಎಂಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಯಶ್ವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಚಿನ್ ಹಾಗೂ ದರ್ಶನ್ ಗಂಭೀರ ಗಾಯಗೊಂಡಿದ್ದಾರೆ. ಯಶ್ವಂತ್ ಮದ್ದೂರಿನ ಮರಳಿಗ ಗ್ರಾಮದ ಯಶವಂತ್ … Read more

ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಉರುಳಿದ ಕಾರು

ಹಾಸನ: ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಇನ್ನೋವಾ ಕಾರು ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದ ಬಳಿ ನಡೆದಿದೆ. ಬೇಲೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ರಸ್ತೆ ತಿರುವಿನಲ್ಲಿ ನಿಯಂತ್ರಣ ಸಿಗದೇ ಅಡಿಕೆ ತೋಟಕ್ಕೆ ಬಿದ್ದಿದೆ. ಕಾರು ಚಾಲಕ ಮಹಮದ್ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿಗೆ ಕಾರು ಡಿಕ್ಕಿ: ಇಬ್ಬರು ಸಾವು

ಚಿಕ್ಕಬಳ್ಳಾಪುರ: ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಟಿಕ್ಕಿ ರಕ್ಷಿತಾ ರೆಡ್ಡಿ (23) ಹಾಗೂ ಪವನ್ ರೆಡ್ಡಿ (30) ಮೃತರು. ರಕ್ಷಿತಾ ರೆಡ್ಡಿ ಪತಿ ರಾಜಶೇಖರ್ ರೆಡ್ಡಿ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಶೆಟ್ಟಿಗೆರೆ ಕ್ರಾಸ್ ಬಳಿ ಸಂಭವಿಸಿದೆ. ರಕ್ಷಿತಾ ಹಾಗೂ ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜನಿಯರ್ ಆಗಿದ್ದರು. ಇಬ್ಬರೂ ತಮ್ಮ ಸಂಬಂಧಿಪವನ್ ರೆಡ್ಡಿ ಜೊತೆ ಕಾರಿನಲ್ಲಿ ಅನಂತಪುರದ ಸ್ವಗ್ರಾಮ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಕಾರು … Read more

ನಾನು ಸಿಎಂ ಆದರೆ ಮುಸ್ಲಿಮರ ಅಲ್ಪಸಂಖ್ಯಾತರ ಪಟ್ಟಿಗೆ ಕೊಕ್: ಯತ್ನಾಳ್

ವಿಜಯಪುರ: ನಾನು ಸಿಎಂ ಆಗಿ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಂಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಾಹಾಕುತ್ತೇನೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಆಡಳಿತ ನಡೆಸುತ್ತೇನೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂಜನೇಯನ ಸನ್ನಿಧಾನದಲ್ಲಿ ನಿಂತು ಹೇಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಿ ಅಂತ ಕೇಳಲ್ಲ. ಅವರಾಗಿಯೇ ಅಪ್ಪ, ಮಗನ ಕೈ ಬಿಟ್ಟು ನನ್ನನ್ನು ಬಿಜೆಪಿಗೆ ಬನ್ನಿ ಅಂತಾ ಕರೆಯುತ್ತಾರೆ. ಬಳಿಕ ಸಿಎಂ ಆಗಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ ತರಹ ರಾಜ್ಯಭಾರ … Read more