
ಬೆಂಗಳೂರು: ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ಗಳು ಜನತೆಗೆ ಶಾಕ್ ಕೊಟ್ಟಿವೆ. ನಯಾರ ಪೆಟ್ರೋಲ್ ಬಂಕ್ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಶೆಲ್ ಪೆಟ್ರೋಲ್ ಬಂಕ್ ಕೂಡ ದರ ಹೆಚ್ಚಿಸಿದೆ.
ಬಂಕ್ಗಳಲ್ಲಿ 1 ಲೀ. ಪೆಟ್ರೋಲ್ ಬೆಲೆ 6 ರೂಪಾಯಿ ಮತ್ತು ಲೀಟರ್ ಡೀಸೆಲ್ ಬೆಲೆ 7 ರೂಪಾಯಿ ಹೆಚ್ಚಿಸಿದೆ. ಇದು ಕಳೆದ 15 ದಿನಗಳಲ್ಲಿ 3ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ. ಪ್ರೀಮಿಯಂ ಪೆಟ್ರೋಲ್ ಜೊತೆಗೆ ಸಾಮಾನ್ಯ ಪೆಟ್ರೋಲ್ ದರವನ್ನು ಶೆಲ್ ಪೆಟ್ರೋಲ್ ಬಂಕ್ ಹೆಚ್ಚಳ ಮಾಡಿದೆ.
106 ರೂ. ಇದ್ದ ಪೆಟ್ರೋಲ್ ದರವನ್ನ 108.50 ರೂ.ಗೆ ಏರಿಕೆ ಮಾಡಲಾಗಿತ್ತು. ಈಗ 6 ರೂಪಾಯಿ ಹೆಚ್ಚಿಸಿದ್ದು, ಸಾಮಾನ್ಯ ಪೆಟ್ರೋಲ್ ದರ 112 ರೂ.ಗೆ ಹೆಚ್ಚಳವಾಗಿದೆ. ಪ್ರಿಮಿಯಂ ಪೆಟ್ರೋಲ್ ದರ ಪ್ರತಿ ಲೀಟರ್ಗೆ 122.42 ರೂಪಾಯಿ ತಲುಪಿದೆ. ಸಾಮಾನ್ಯ ಡೀಸೆಲ್ ಬೆಲೆ ಕಳೆದ ವಾರ 91 ರೂ. ನಿಂದ 93.50 ರೂ.ಗಳಿಗೆ ಏರಿಕೆಯಾಗಿತ್ತು. ಈಗ ಲೀಟರ್ ಡಿಸೇಲ್ 98 ರೂಪಾಯಿಗೆ ಹೆಚ್ಚಳವಾಗಿದೆ. ಪ್ರಿಮಿಯಂ ಡೀಸೆಲ್ ಪ್ರತಿ ಲೀ.ಗೆ 108.50 ರೂ. ತಲುಪಿದೆ.
ಶೆಲ್ ಪೆಟ್ರೋಲ್ ಬೆಲೆ ಏರಿಕೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


