
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ವೇಳೆ ಹಾಜರಾಗದಂತೆ ಟಿವಿಕೆ ಶಾಸಕ ಆರ್.ಶ್ರೀನಿವಾಸ ಸೇತುಪತಿ ಅವರನ್ನು ತಡೆದಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.
ಈ ಸಂಬಂಧ ಸೇತುಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ನ್ಯಾಯಪೀಠ, ಕನಿಷ್ಠವಾಗಿ ಹೇಳುವುದಾದರೆ ಇದು ಅಮಾನವೀಯ ನಡೆಯಾಗಿದೆ. ಚುನಾವಣಾ ಅರ್ಜಿಯೇ ಪರಿಹಾರ ಎಂದು ಹೈಕೋರ್ಟ್ ಹೇಳುತ್ತದೆ. ಆದರೆ ಆರ್ಟಿಕಲ್ 226ರ ಅರ್ಜಿಯನ್ನು ಇನ್ನೂ ಪರಿಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸಂವಿಧಾನದ 226 ನೇ ವಿಧಿಯು ಕೆಲವು ರಿಟ್‌ಗಳನ್ನು ಹೊರಡಿಸಲು ಹೈಕೋರ್ಟ್ ಅಧಿಕಾರದ ಬಗ್ಗೆ ವ್ಯವಹರಿಸುತ್ತದೆ. ಈ ವಿಷಯದಲ್ಲಿ ಹೈಕೋರ್ಟ್ನಲ್ಲಿ ಬಾಕಿ ಇರುವ ವಿಚಾರಣೆಯನ್ನು ಸಹ ಪೀಠ ತಡೆಹಿಡಿದಿದೆ. ಡಿಎಂಕೆ ನಾಯಕ ಪೆರಿಯಕರುಪ್ಪನ್ ವಿರುದ್ಧ ಒಂದೇ ಮತದ ಅಂತರದಿAದ ಸೇತುಪತಿ ಗೆದ್ದಿದ್ದರು.
ಟಿವಿಕೆ ಶಾಸಕರಿಗೆ ‘ಸುಪ್ರೀಂ’ನಲ್ಲಿ ಗೆಲುವು








