ತುಮಕೂರು: ಕೆಪಿಎಸ್ಸಿ ಪಶುವೈದ್ಯರ ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದ ಅವಧಿಯಲ್ಲೂ ಅವ್ಯವಹಾರ ನಡೆಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ದಿಕ್ಕಿನಲ್ಲೂ ಸಿಐಡಿ ತನಿಖೆ ನಡೆಸುತ್ತಿದೆ.
2025ರ ಆಗಸ್ಟ್ನಲ್ಲಿ ಸಿಂಡಿ
ಕೇಟ್ ಸದಸ್ಯನಾಗಿ ನೇಮಕವಾಗಿದ್ದ ಕನ್ನಾಳೆ ಖರೀದಿ ಹಾಗೂ ಕಾಮಗಾರಿ ಉಪಸಮಿತಿಯಲ್ಲಿದ್ದರು. ವಿಶ್ವವಿದ್ಯಾಲಯದ ಬಜೆಟ್ ಜಾರಿಯಲ್ಲೂ ಪ್ರಭಾವ ಬೀರಿದ್ದರ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಇದರ ನಡುವೆ ವಿವಿ ಆಡಳಿತ ಮಂಡಳಿ ಕನ್ನಾಳೆಗೆ ಕ್ಲೀನ್ಚಿಟ್ ನೀಡಿದ್ದು, ಈ ಕುರಿತು ಸಿಐಡಿ, ಸಿಬಿಐ ಹಾಗೂ ರಾಜ್ಯ ಗಹ ಇಲಾಖೆಗೆ ಪ್ರಮಾಣಪತ್ರ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕುಲಪತಿ ಹ್ದುಗೆ ‘ವ್ಯವಹಾರ’
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹ್ದುೆಗೆ ಅರ್ಜಿ ಸಲ್ಲಿಸಿದ್ದ ಹಿರಿಯ ಪ್ರಾಧ್ಯಾಪಕರನ್ನು ಬಸವರಾಜ ಕನ್ನಾಳೆ ಸಂಪರ್ಕಿಸಿ, ಹ್ದುಗೆ ಕೊಡಿಸುವುದಾಗಿ ವ್ಯವಹಾರ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹ್ದುೆ ಕೊಡಿಸುವುದಾಗಿ ತುಮಕೂರು ವಿವಿಯ ನಿವೃತ್ತ ಕುಲಪತಿಯೊಬ್ಬರಿಂದಲೂ ಹಣ ಪಡೆದಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಾಳೆಯ ದೂರವಾಣಿ ಕರೆಗಳ ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ಈ ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.






