ಮೈಸೂರು: ಈ ಬಾರಿಯ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಯುವ ದಸರಾ ಉದ್ಘಾಟನೆಗೆ ಮೂಲತಹ ಕನ್ನಡಿಗರಾದ ಖ್ಯಾತ ನಟ, ನೃತ್ಯಪಟು ಪ್ರಭುದೇವ ಅವರಿಗೆ ಆಹ್ವಾನ ನೀಡಲಾಗಿದೆ.
ಮೈಸೂರು ಜಿಲ್ಲಾಡಳಿತ ನಟ ಪ್ರಭುದೇವ ಅವರಿಗೆ ಅಧಿಕೃತ ಆಹ್ವಾನ ಕೊಟ್ಟಿದೆ. ಪೇಟಾ ತೊಡಸಿ, ಶಾಲು, ಹೂವಿನ ಹಾರ ಹಾಕಿ ನಟನಿಗೆ ಗೌರವಪೂರ್ವಕವಾಗಿ ಆಹ್ವಾನ ನೀಡಲಾಗಿದೆ. ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯುವ ದಸರಾ ಒಂದು ಪ್ರಮುಖ ಆಕರ್ಷಣೆ. ಈ ಸಮಾರಂಭದಲ್ಲಿ ಸಿನಿತಾರೆಯರು, ಖ್ಯಾತ ಗಾಯಕರು ಪಾಲ್ಗೊಂಡು ಯುವಜನತೆಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ. ವಿವಿಧ ಕಲಾತಂಡಗಳು ಇಲ್ಲಿ ನೃತ್ಯ ಪ್ರದರ್ಶನ ಮಾಡುತ್ತವೆ. ಖ್ಯಾತ ಗಾಯಕರು ತಮ ಸುಮಧುರ ಗಾಯನದಿಂದ
ಯುವಜನರನ್ನು ರಂಜಿಸುತ್ತಾರೆ.
ಯುವ ದಸರಾ ಉದ್ಘಾಟನೆಗೆ ನಟ ಪ್ರಭುದೇವಗೆ ಆಹ್ವಾನ






