ಉದ್ಯಾನವನ ಭೂಮಿಯ ಶೇ.5ರಷ್ಟನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ವಿವಾದಿತ ಪಾರ್ಕ್ ಬಿಲ್ ಹಿಂಪಡೆದ ಸರ್ಕಾರದ ನಿರ್ಧಾರವನ್ನು ಸಿಎಂ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು.
ಬಿಲ್ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅದರ ಉದ್ದೇಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿಯೇ ಅದನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಲ್ ಹಿಂಪಡೆದಿರುವುದನ್ನು ಬಿಜೆಪಿ ತನ್ನ ಗೆಲುವು ಎಂದು ಬಿಂಬಿಸುತ್ತಿರುವುದಕ್ಕೆ ಆಕ್ಷೇಪಿಸಿದ ಅವರು, ಬಿಜೆಪಿಯನ್ನು ಅಭಿವೃದ್ಧಿ ವಿರೋಧಿ ಪಕ್ಷ ಎಂದು ಟೀಕಿಸಿದರು. ಬೆಂಗಳೂರಿಗೆ ಎದುರಾಗಿರುವ ಶಾಪಕ್ಕೂ ಬಿಜೆಪಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಪಾರ್ಕ್ ಬಿಲ್ ವಾಪಸ್: ಸಿಎಂ ಡಿಕೆಶಿ ಸಮರ್ಥನೆ






