
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿಶ್ವಾಸ ಮತ ಅಗ್ನಿಪರೀಕ್ಷೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜಯ್ ಸರ್ಕಾರಕ್ಕೆ 144 ಶಾಸಕರ ಬೆಂಬಲ ದೊರೆತಿದೆ.
ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತಯಾಚನೆ ವೇಳೆ ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲದೊAದಿಗೆ ತಮಿಳಗ ವೆಟ್ರಿ ಕಳಗಂ ಪಕ್ಷ ಬಹುಮತ ಸಾಬೀತುಪಡಿಸಿದೆ.
ಮತ್ತೊಂದೆಡೆ ಟಿವಿಕೆ ಬೆಂಬಲಿಸುವ ಮೂಲಕ ಎಐಎಡಿಎಂಕೆ ಛಿದ್ರಗೊಂಡಿದೆ. ಟಿವಿಕೆ, ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಮ್ ಲೀಗ್, ವಿಸಿಕೆ ಜೊತೆ ಎಐಎಡಿಎಂಕೆಯ ಬಂಡಾಯ ಎದ್ದಿರುವ 27 ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ವಿಧಾನಸಭೆ ಕಲಾಪ ಬುಧವಾರ ಆರಂಭವಾಗುತ್ತಿದ್ದAತೆಯೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿಶ್ವಾಸ ಮತ ಯಾಚನೆಗೆ ನಿರ್ಣಯ ಮಂಡಿಸಿದರು. ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮತ್ತು ಸಿಪಿಎಂ, ವಿಸಿಕೆ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದವು. ಇದರಿಂದಾಗಿ ಟಿವಿಕೆಗೆ ಸದನದಲ್ಲಿ 120 ಶಾಸಕರ ಬಲವಿತ್ತು. ಮತ್ತೊಂದೆಡೆ ಎಐಎಡಿಎಂಕೆಯ 22 ಶಾಸಕರು ಟಿವಿಕೆ ವಿರುದ್ಧ ಮತ ಚಲಾಯಿಸಿದರು. ಐವರು ಶಾಸಕರು ಗೈರುಹಾಜರಾದರು.
ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ) ಮತ್ತು ವಿಸಿಕೆ ಶಾಸಕರು ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ಟಿವಿಕೆ ಬಹುಮತ ಪರೀಕ್ಷೆಯಲ್ಲಿ ಗೆದ್ದಿತು. ಇಬ್ಬರು ಶಾಸಕರನ್ನು ಹೊಂದಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದೆ. ಅಮ್ಮ ಮಕ್ಕಳ್ ಮುನ್ನೆತ್ರ ಕಜಗಂ ಉಚ್ಚಾಟಿತ ಶಾಸಕ ಕಾಮರಾಜ್ ಟಿವಿಕೆಯನ್ನು ಬೆಂಬಲಿಸಿದ್ದಾರೆ.
‘ಅಗ್ನಿಪರೀಕ್ಷೆ’ಯಲ್ಲಿ ವಿಜಯ್ ಗೆಲುವು ಎಐಎಡಿಎಂಕೆ ಬಂಡಾಯ ಬಣದ ಬೆಂಬಲ 144 ಶಾಸಕರ ವಿಶ್ವಾಸ ಮತ













