--ಇಲ್ಲಿ ಜಾಹೀರಾತು--

ತುಮಕೂರು ವಿವಿಯಲ್ಲೂ ಕನ್ನಾಳೆ ಕರಾಮತ್ತು? ಸಿಂಡಿಕೇಟ್‌ ಸದಸ್ಯನಾಗಿ ಅವ್ಯವಹಾರ ನಡೆಸಿದ ಆರೋಪ; ಸಿಐಡಿ ತನಿಖೆ

On: September 5, 2026 2:59 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

ತುಮಕೂರು: ಕೆಪಿಎಸ್‌‍ಸಿ ಪಶುವೈದ್ಯರ ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯನಾಗಿದ್ದ ಅವಧಿಯಲ್ಲೂ ಅವ್ಯವಹಾರ ನಡೆಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ದಿಕ್ಕಿನಲ್ಲೂ ಸಿಐಡಿ ತನಿಖೆ ನಡೆಸುತ್ತಿದೆ.
2025ರ ಆಗಸ್ಟ್‌ನಲ್ಲಿ ಸಿಂಡಿಕೇಟ್‌ ಸದಸ್ಯನಾಗಿ ನೇಮಕವಾಗಿದ್ದ ಕನ್ನಾಳೆ ಖರೀದಿ ಹಾಗೂ ಕಾಮಗಾರಿ ಉಪಸಮಿತಿಯಲ್ಲಿದ್ದರು. ವಿಶ್ವವಿದ್ಯಾಲಯದ ಬಜೆಟ್‌ ಜಾರಿಯಲ್ಲೂ ಪ್ರಭಾವ ಬೀರಿದ್ದರ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಇದರ ನಡುವೆ ವಿವಿ ಆಡಳಿತ ಮಂಡಳಿ ಕನ್ನಾಳೆಗೆ ಕ್ಲೀನ್‌ಚಿಟ್‌ ನೀಡಿದ್ದು, ಈ ಕುರಿತು ಸಿಐಡಿ, ಸಿಬಿಐ ಹಾಗೂ ರಾಜ್ಯ ಗಹ ಇಲಾಖೆಗೆ ಪ್ರಮಾಣಪತ್ರ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕುಲಪತಿ ಹ್ದುಗೆ ‘ವ್ಯವಹಾರ’

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹ್ದುೆಗೆ ಅರ್ಜಿ ಸಲ್ಲಿಸಿದ್ದ ಹಿರಿಯ ಪ್ರಾಧ್ಯಾಪಕರನ್ನು ಬಸವರಾಜ ಕನ್ನಾಳೆ ಸಂಪರ್ಕಿಸಿ, ಹ್ದುಗೆ ಕೊಡಿಸುವುದಾಗಿ ವ್ಯವಹಾರ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಅನಂತಪುರ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹ್ದುೆ ಕೊಡಿಸುವುದಾಗಿ ತುಮಕೂರು ವಿವಿಯ ನಿವೃತ್ತ ಕುಲಪತಿಯೊಬ್ಬರಿಂದಲೂ ಹಣ ಪಡೆದಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಾಳೆಯ ದೂರವಾಣಿ ಕರೆಗಳ ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ಈ ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now