--ಇಲ್ಲಿ ಜಾಹೀರಾತು--

ರಾಜ್ಯದಲ್ಲಿ ಜನಗಣತಿ ಆರಂಭ ಇಂದಿನಿಂದ  ಸ್ವಯಂ ಗಣತಿ ಕೂಡ ಆರಂಭ

On: April 1, 2026 2:51 PM
Follow Us
--ಇಲ್ಲಿ ಜಾಹೀರಾತು--

Whatsapp Channel

Join Now

Telegram Group

Join Now

ಬೆಂಗಳೂರು: ರಾಜ್ಯದಲ್ಲಿ ಇಂದಿನಿAದ ಜನಗಣತಿ ಆರಂಭಗೊAಡಿದೆ. ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು 2ನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇಂದಿನಿAದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಸ್ವಯಂ ಗಣತಿಯಲ್ಲಿ ಸ್ವತಃ ಜನರೇ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಗಣತಿ ವೆಬ್ ಪೋರ್ಟಲ್‌ನಲ್ಲಿ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಮನೆಯ ವಿವರ ದಾಖಲಿಸಬಹುದು. ನೋಂದಣಿ ನಂತರ ಸ್ವಯಂಗಣತಿ ಐಡಿಯನ್ನ ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು.
ಏ.1ರಿಂದ ಏ.15ರವರೆಗೂ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ನಂತರ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಎರಡನೇ ಹಂತವಾಗಿ ಏ.16ರಿಂದ ಮೇ 15ರ ಅವಧಿಯಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ.

ಸ್ವಯಂ ಗಣತಿ ಹೇಗೆ?
* ಅಧಿಕೃತ ಪೋರ್ಟಲ್ www.ce.census.gov.in ಗೆ ಭೇಟಿ ನೀಡಿ.
* ಓಟಿಪಿ ಬರುವ ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಬೇಕು.
* ರಾಜ್ಯ, ಜಿಲ್ಲೆ, ಸ್ಥಳೀಯ ವಿವರ ಹಾಕಬೇಕು.
* ಡಿಜಿಟಲ್ ಮ್ಯಾಪ್‌ನಲ್ಲಿ ಮನೆಯ ಸ್ಥಳವನ್ನ ಗುರುತಿಸುವುದು.
* ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬAಧಿಸಿದ ವಿವರಗಳನ್ನ ಭರ್ತಿ ಮಾಡಿ.
* ಗುರುತಿಸಿದ ನಂತರ ಸ್ವಯಂ ಗಣತಿ ಐಡಿ ಪಡೆಯುತ್ತೀರಿ.
* ನಿಮ್ಮ ಸ್ವಯಂ ಗಣತಿಯ ಐಡಿಯನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು..
* ಗಣತಿದಾರರು ಮನೆಗೆ ಭೇಟಿ ನೀಡಿದಾಗ ನಿಮ್ಮ ಸ್ವಯಂ ಐಡಿಯನ್ನು ನೀಡಬೇಕು.
* ಗಣತಿದಾರರು ಸ್ವಯಂ ಐಡಿ ಮೂಲಕ ವಿವರಗಳನ್ನು ದೃಢಿಕರಿಸುತ್ತಾರೆ.

Author

Editor TumkurVarthe

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು

WhatsApp

Join Now

Telegram

Join Now

Instagram

Join Now